ಮಂಗಳವಾರ ಕೇಂದ್ರದಿಂದ ತಂಡವೊಂದು ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದು ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಕೇಂದ್ರದ ಅಧಿಕಾರಿಗಳು ಸಿಎಂ ಜೊತೆ ಸಭೆ ನಡೆಸಿದ್ದಾರೆ. ಸಿ.ಎಂ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆದಿದ್ದು ; ಸಭೆಯಲ್ಲಿ ಆರೋಗ್ಯ ಸಚಿವ ಶ್ರೀ ರಾಮುಲು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.
ರಾಜ್ಯಕ್ಕೆ ಕೊರೋನಾ ಬಂದಿದ್ದು ಯಾವಾಗ ? ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಮಾಡಿದ ಕ್ರಮಗಳು ಏನೇನು , ಎಲ್ಲೆಲ್ಲಿ ಕರೋನಾ ಹೆಚ್ಚಿದೆ? ಲಾಕ್ ಡೌನ್ ಮಾಡಿದ ನಂತರ ಕೋವಿಡ್ ಹೇಗೆ ನಿಯಂತ್ರಣ ಆಗಿದೆ , ಲಾಕ್ ಡೌನ್ ಸಡಿಲಿಕೆ ನಂತರ ಕೋವಿಡ್ ಎಲ್ಲಿ ಹೆಚ್ಚಾಗಿದೆ, ಕಂಟೋನ್ಮೆಂಟ್ ಝೋನ್ ನಲ್ಲಿ ಹೇಗಿದೆ , ಕೊರೋನಾ ಸೋಂಕಿತರಿಗೆ ಸರ್ಕಾರ ಮಾಡಿರೋ ಚಿಕಿತ್ಸಾ ಕ್ರಮಗಳೇನು ಹಾಗೂ ಬೆಂಗಳೂರಿನಲ್ಲಿ ಹೆಚ್ಚಾಗ್ತಿರೋ ಕೊರೋನಾ ದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಕೇಂದ್ರದ ಅಧಿಕಾರಿಗಳಿಗೆ ವರದಿ ಮಂಡಿಸಿದ್ದಾರೆ.
ಐವರು ನೇತೃತ್ವದಲ್ಲಿರೋ ಅಧಿಕಾರಗಳ ತಂಡ ಇನ್ನು ೨ ದಿವಸಗಳ ಕಾಲ ರಾಜ್ಯದಲ್ಲೇ ಉಳಿಯಲಿದ್ದು ಕಂಟೋನ್ಮೆಂಟ್ ಝೋನ್ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿ ಅಲ್ಲಿ ಅಧ್ಯಯನ ನಡೆಸಲಿದ್ದಾರೆ.