ಬೆಂಗಳೂರು: ಕೇಂದ್ರ ರೈಲ್ವೇ ಸಚಿವ ಸುರೇಶ್ ಅಂಗಡಿ(65) ಕೊರೋನಾ ಸೋಂಕಿನಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಸದಾ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದ ಸುರೇಶ್ ಅಂಗಡಿ ಅವರು ತೀವ್ರ ಜ್ವರವಿದ್ದರೂ ಬಾಂಬೆಗೆ ಪ್ರಯಾಣಿಸಿ, ನಂತರ ದೆಹಲಿಗೂ ತೆರಳಿದ್ದರು.
ಅಲ್ಲಿ ತೆರಳಿದ ನಂತರವೂ 3 ದಿನದ ಬಳಿಕ ವಿಪರೀತ ಜ್ವರ, ಕೆಮ್ಮು, ಗಂಟಲು ನೋವಿಗೆ ತುತ್ತಾದುದರಿಂದ ಅಲ್ಲಿನ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸಚಿವರ ಆಪ್ತರು ತಿಳಿಸಿದ್ದಾರೆ. ಪರೀಕ್ಷೆಗೆ ಒಳಗಾಗಿ ಕೋವಿಡ್-19 ಪತ್ತೆಯಾದ ಬಳಿಕ ಪ್ಲಾಸ್ಮಾ ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಬುಧವಾರ ಸಂಜೆ ಸಚಿವ ಸುರೇಶ್ ಅಂಗಡಿ ಕೊನೆಯುಸಿರೆಳೆದಿದ್ದು ಗರುವಾರ ದೆಹಲಿಯಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆದಿದೆ. ದೆಹಲಿಯ ದ್ವಾರಕಾ ಸೆಕ್ಟರ್ ನ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆದಿದೆ .. ಸರ್ಕಾರದ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆದಿದ್ದು ; ಮಗನ ಅಂತ್ಯಕ್ರಿಯೆಯನ್ನು ಸುರೇಶ್ ಅಂಗಡಿ ತಾಯಿ ಬೆಳಗಾವಿಯ ನಿವಾಸದಲ್ಲೇ ಕುಳಿತು ಅಂತ್ಯಕ್ರಿಯೆ ವೀಕ್ಷಿಸಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ ವೀಕ್ಷಿಸಿ ಕಣ್ಣೀರಿಟ್ಟಿದ್ದಾರೆ.
ಬೆಳಗಾವಿಯ ಕೊಪ್ಪ ಗ್ರಾಮದಲ್ಲಿ ಸೋಮವ್ವ ಮತ್ತು ಚೆನ್ನಬಸವ ದಂಪತಿಗೆ 1955ರ ಜೂನ್ 1ರಂದು ಜನಿಸಿದರು. ಎಸ್ ಎಸ್ ಎಸ್ ಸಂಸ್ಥೆಯಲ್ಲಿ ಕಾಮರ್ಸ್ ಪದವೀದರರಾಗಿ, ಉದ್ಯಮಿಯಾಗಿ, ನಂತರ ಉತ್ತಮ ರಾಜಕೀಯ ನಾಯಕರಾಗಿದ್ದು, ಸತತ ನಾಲ್ಕನೇ ಬಾರಿ ಬಿಜೆಪಿ ಪಕ್ಷದಲ್ಲಿ ಗೆದ್ದು ಸುರೇಶ್ ಅಂಗಡಿ ಜನಸೇವಕನಾಗಿ ಕೆಲಸ ಮಾಡಿದ್ದಾರೆ .
ಇವರು ರೈಲ್ವೇ ಸಚಿವರಾಗಿ ಉತ್ತಮ ಗಣನೀಯ ಸೇವೆ ಸಲ್ಲಿಸಿದ ಮಹಾತ್ಮರು. ಸಚಿವ ಸುರೇಶ್ ಅಂಗಡಿ ಅವರ ಅಂತ್ಯ ಸಂಸ್ಕಾರವನ್ನು ಇಂದು (ಗುರುವಾರ) ದೆಹಲಿಯಲ್ಲೇ ಲಿಂಗಾಯತ ಸಂಪ್ರದಾಯದಂತೆ ನಡೆಸಲಿದ್ದು ; ಕೆಲವು ಕುಟುಂಬ ಸದಸ್ಯರು ಮಾತ್ರ ಕಾರ್ಯದಲ್ಲಿ ಪಾಲ್ಗೊಳ್ಳಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ . ಜೊತೆಗೆ ಕೊರೋನಾ ಮುಂಜಾಗೃತಾ ಕ್ರಮದಂತೆ ಅಂತ್ಯಕ್ರಿಯೆ ನಡೆಯಲಿದೆ