ಜನರನ್ನು ನಿದ್ದೆಗೆಡಿಸುರವ ಕೊರೋನಾ ವೈರಸ್ ಇದೀಗ ಕರಾವಳಿಗೂ ಕಾಲಿಟ್ಟಿದ್ದೆ… ಕೇರಳದಲ್ಲಿ ಕೋರೋನಾ ವೈರಸ್ ಪತ್ತೆಯಾಗಿದ್ದು. ಕರಾವಳಿ ಜನರ ಭಯಕ್ಕೆ ಕಾರಣವಾಗಿದೆ. ಇದೀಗ ಕೇರಳ ಮೂಲದ ವಿದ್ಯಾರ್ಥಿಯೊರ್ವನಲ್ಲಿ ಕೋರೋನಾ ವೈರಸ್ ಪತ್ತೆಯಾಗಿದೆ.. ಈತ ಚೀನಾದ ಊಹನೋದಲ್ಲಿ ಶಿಕ್ಷಣ ಪಡೆಯುತ್ತಿದ್ದು ; ಕೇರಳಕ್ಕೆ ವಾಪಾಸ್ಸಾಗಿದ್ದಾನೆ. ಈತನೊಂದಿಗೆ ಸುಮಾರು 630 ಪ್ರಯಾಣಿಕರಿದ್ದುಎಲ್ಲರನ್ನೂ ತಪಾಸಣೆಗೆ ಒಳಪಡಿಸಿದ್ದಾರೆ.
ಇದೀಗ ಚೀನಾದಲ್ಲಿ ನೆಲೆಸಿರೋ ಭಾರತೀಯನ್ನೂ ಭಾರತಕ್ಕೆ ಕರೆತಂದು ತಪಾಸಣೆ ನಡೆಸಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೊರೋನಾ ವೈರಸ್ ಚೀನಾದಲ್ಲಿ ಈವರೆಗೆ 800ಕ್ಕೂ ಹೆಚ್ಚೂ ಮಂದಿಗೆ ತಗುಲಿದ್ದು ಈಗಾಗಲೇ 170 ಜನ ಮೃತಪಟ್ಟಿದ್ದಾರೆ . ಈ ಹಿನ್ನಲೆ ಸರ್ಕಾರ ಎಲ್ಲಾ ರೀತಿಯಲ್ಲಿ ತಪಾಸಣೆ ನಡೆಸಲು ತಾಕೀತು ಮಾಡಿದೆ.. ಇತ್ತ ಕರಾವಳಿ ಪ್ರದೇಶದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.