ಕೊಡಗು: ಇಂದಿನಿಂದ ಮತ್ತೆ ಕೊಡಗಿನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ. ಸೆ. 19 ರಿಂದ 21 ರವರೆಗೆ ಹೆಚ್ಚು ಮಳೆ ಆಗುವ ಸಾದ್ಯತೆ ಇದೆ. ಈ ಹಿಂದೆ ಭಾರೀ ಮಳೆಗೆ ತತ್ತರಿಸಿದ ಕೊಡಗಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಕಳೆದ 2 – 3 ದಿನಗಳಿಂದ ಮಡಿಕೇರಿ, ಭಾಗಮಂಡಲ, ನಾಪೋಕ್ಲು, ತಲಕಾವೇರಿ ಹಾಗೂ ಇದರ ಅಕ್ಕ ಪಕ್ಕದ ಊರುಗಳಲ್ಲಿ ಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ . ಸೆ. 19 ರಿಂದ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಈ ಹಿಂದೆ ಸುರಿದ ಮಳೆಯಿಂದಾಗಿ ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವಘಡಗಳು ಸಂಭವಿಸಿದ್ದು, ಹಲವಾರು ಮನೆಗಳು , ಜಾನುವಾರು, ಬೆಳೆ ನಾಶವಾಗಿದ್ದು ಗುಡ್ಡ ಕುಸಿತದಂತಹ ತೊಂದರೆಗಳು ಉಂಟಾಗಿತ್ತು. ಅಲ್ಲದೆ ಅರ್ಚಕರ ಕುಟುಂಬವು ಸಾವಿನ ದುರಂತಕ್ಕೆ ಬಲಿಯಾಗಿತ್ತು. ಈ ಎಲ್ಲಾ ತೊಂದರೆಗಳನ್ನು ಮನಗಂಡ ಜಿಲ್ಲಾಡಳಿತ ಈ ಭಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರಿಗೆ ಸೂಚನೆ ನೀಡಿದೆ.