ಬಿಗ್ ಬಾಸ್ ಮನೆಯಲ್ಲೀಗ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಕಾಂಬಿನೇಷನ್ ಸದ್ಯ ಭಾರೀ ಸದ್ದು ಮಾಡುತ್ತಿದೆ..ಶೈನ್ ಶೆಟ್ಟಿ ಗಡ್ಡವನ್ನು ತೆಗೆಸಿ ಕ್ಲೀನ್ ಶೇವ್ ಮಾಡಿಸಬೇಕು ಎಂಬ ದೀಪಿಕಾ ಯೋಜನೆ ಕೊನೆಗೂ ಸಾಕಾರವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸ್ತಿವೆ..ಇಂದಿನ ಬಿಗ್ ಬಾಸ್ ಪ್ರೊಮೋವನ್ನು ನೋಡಿದ್ರೆ ಶೈನ್ ಗಡ್ಡ ತೆಗೆಯೋ ಸ್ಟಾರ್ಟಿಂಗ್ ಪಾಯಿಂಟ್ ಹಾಗೂ ಮುಖ ಮರೆಸಿದ ಶೈನ್ ನನ್ನು ನೋಡಿ ದೀಪಿಕಾ ಅಚ್ಚರಿಗೊಳ್ಳುವಂತೆಯೂ ಕಾಣ್ತಾ ಇತ್ತು..
ಯಸ್..ಬಿಗ್ ಬಾಸ್ ಸ್ಪರ್ಧಾಳುಗಳಿಗಾಗಿ ದಿನಕ್ಕೊಂದು ಹೊಸ ಟಾಸ್ಕ್ ಗಳು, ಹಿಡನ್ ಅಜೆಂಡಾಗಳನ್ನು ಕೊಡುತ್ತಲೇ ಇರ್ತಾರೆ..ಇದರಂತೆ ದೀಪಿಕಾಗೆ ಕೊಟ್ಟಿರೋ ಟಾಸ್ಕ್ ನ ಫಲವಾಗಿ ಶೈನ್ ಗಡ್ಡದ ಟಾಸ್ಕ್ ಬಂದಿದ್ದು ಈ ಟಾಸ್ಕ್ ನಲ್ಲಿ ನಿಜಕ್ಕೂ ದೀಪಿಕಾ ಗೆಲುವು ಸಾಧಿಸ್ತಾರಾ..? ಇಲ್ಲವೇ ದೀಪಿಕಾ ಫಾರ್ಮುಲಾ ಫ್ಲಾಪ್ ಆಗಿ ಮತ್ತೆ ಶೈನ್ ಗಡ್ಡ ತೆಗೆಸಲು ಸರ್ಕಸ್ ಮಾಡ್ತಾರಾ ಎಂಬುದನ್ನು ಇಂದಿನ ಬಿಗ್ ಬಾಸ್ ಎಪಿಸೋಡ್ ನಲ್ಲಿ ನೋಡಿ ತಿಳಿಯಬೇಕಿದೆ.