ದೆಹಲಿ: ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಸೋಂಕು ಗುರುವಾರ ಸಾರ್ವಕಾಲಿಕ ದಾಖಲೆಯನ್ನು ಕಂಡಿದ್ದು ಕಳೆದ 24 ಗಂಟೆಯಲ್ಲಿ ಒಟ್ಟಾರೆ 95,735 ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 44,65,864ಕ್ಕೆ ತಲುಪಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 1,172 ಮಂದಿ ಸಾವನ್ನಪ್ಪಿದ್ದು, ಇದೂವರೆಗೂ ಮಹಾಮಾರಿ ವೈರಸ್ ದೇಶದಲ್ಲಿ 75062 ಮಂದಿಯನ್ನು ಬಲಿಪಡೆದುಕೊಂಡಿರುವುದಾಗಿ ವರದಿಯಾಗಿದೆ.
ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 44,65,864 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟರೆ, ಇದರ ಪೈಕಿ 34,71,784 ಮಂದಿ ಗುಣಮುಖರಾಗಿದ್ದು, 9,19,018 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 11, 29,756 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.