ಕೊರೋನಾ ರಾಜಕೀಯ ಪಕ್ಷಗಳ ಅಸ್ತ್ರ ವಾಗಿ ಬದಲಾಗುತ್ತಿದೆಯೇ?

ಅಮೆರಿಕಾ, ನ. 2: ವಿಶ್ವದ ಹಿರಿಯಣ್ಣ ಅಮೆರಿಕಾದಲ್ಲೂ ಸಹ ಕೊರೊನಾ ಮಹಾಮಾರಿ ರಾಜಕೀಯ ಪಕ್ಷಗಳ ಅಸ್ತ್ರವಾಗಿ ಬಳಕೆಯಾಗುತ್ತಿದ್ದು, ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಶಾಲಿಯಾಗಿ ಡೆಮಾಕ್ರಟಿಕ್ ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನವೇ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸುವ ಸೂಕ್ತವಾದ ಕ್ರಿಯಾ ಯೋಜನೆ ಮಾಡುವುದಾಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಹೇಳಿದ್ದಾರೆ.
ಫಿಲಿಡೆಲ್ಫಿಯಾದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಕೊರೊನಾ ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸುವುದರಲ್ಲಿ ಟ್ರಂಪ್ ಆಡಳಿತ ವಿಫಲವಾಗಿದೆ. ಮಾಸ್ಕ್‌ ಧರಿಸುವ ಬದಲು ಅದನ್ನು ತಮಾಷೆ ಮಾಡುವ ಅಧ್ಯಕ್ಷರಿರುವ ಈ ದೇಶದಲ್ಲಿ ನಾವು ಯಾವ ಸ್ಥಿತಿಗೆ ತಲುಪಿದ್ದೇವೆ ಎಂದು ನೋಡಿ. ಇದೀಗ ಟ್ರಂಪ್ ಅವರನ್ನು ಮನೆಗೆ ಕಳುಹಿಸುವ ಕಾಲ ಬಂದಿದೆ ಎಂದಿದ್ದಾರೆ. ಪ್ರಸ್ತುತ ಅಮೆರಿಕಾದಲ್ಲಿ ಕೊರೊನಾಕ್ಕೆ 2.30 ಲಕ್ಷ ಜನರು ಸಾವನ್ನಪ್ಪಿದ್ದು, 90 ಲಕ್ಷ ಕೊರೊನಾ ಸೋಂಕಿತರಿದ್ದಾರೆ.

Latest News

ರಾಜಕೀಯ

“ಕಾಂಗ್ರೆಸ್ ಬಸ್‍ಗೆ ಎರಡು ಸ್ಟೇರಿಂಗ್” : ಸಚಿವ ಡಾ. ಸುಧಾಕರ್

“ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಂಬಲ್ ಡೋರ್ ಬಸ್‍ನಲ್ಲಿ ಪ್ರಯಾಣಿಸುತ್ತಿದೆ. ಈ ಬಸ್‍ನಲ್ಲಿರುವ ಅವರ ಪಕ್ಷದವರ ಪೈಕಿ ಯಾರನ್ನು ಪ್ರಥಮವಾಗಿ ಕೆಳಗಿಳಿಸುತ್ತಾರೋ ತಿಳಿಯದು.

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.