2016 ಟ್ವೆಂಟಿ-20 ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂಧ್ಯದ ಫೋಟೋವೊಂದನ್ನು ವೈರಲ್ ಆಗಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇದು ನಾನೆಂದಿಗೂ ಮರೆಯಲಾಗದ ಪಂದ್ಯ. ಆ ರಾತ್ರಿ ಫಿಟ್ನೆಸ್ ಟೆಸ್ಟ್‍ಗೆ ಓಡಿಸುವಂತೆ ನನ್ನನ್ನು ಓಡಿಸಿದ ದಿನ ಎಂಬುದಾಗಿ ಬರೆದುಕೊಂಡಿದ್ರು. ಈ ಸ್ಟೇಟ್ ಮೆಂಟ್ ನೋಡಿದ ನೆಟ್ಟಿಗರು ಧೋನಿ ನಿವೃತ್ತಿ ಘೋಷಿಸುತ್ತಾರೆಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಅಲ್ಲದೆ ಸೆ.15ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲೂ ಧೋನಿಯನ್ನು ಕೈಬಿಟ್ಟು, ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಬ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಇವೆಲ್ಲ ಸನ್ನಿವೇಶಗಳಿಂಧಾಗಿ ಧೋನಿ ನಿವೃತ್ತಿ ಪಕ್ಕಾ ಎಂಬುದಾಗಿ ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು. ಆದರೆ ಇದನ್ನ ಧೋನಿ ಪತ್ನಿ ಸಾಕ್ಷಿ, ಅಲ್ಲಗಳೆದಿದ್ದಾರೆ. ಇದು ಬರೀ ವದಂತಿ ಮಾತ್ರ ಎಂದು ಕರೆಯಬಹುದು ಎಂಬುದಾಗಿ ಹೇಳಿ ಟ್ವೀಟ್ ಮಾಡಿದ್ದಾರೆ. ಒಟ್ನಲ್ಲಿ ಖುದ್ದು ಧೋನಿ ಪತ್ನಿಯೇ ಟ್ವೀಟ್ ನೋಡಿದ ಮಂದಿ ಮಾತ್ರ ಈ ಊಹಾಪೋಹಗಳಿಗೆ ಧೋನಿಯೇ ಖುದ್ದು ಉತ್ರ ಕೊಡಬಹುದಿತ್ತಲ್ಲಾ..? ಎಂದು ಪ್ರಶ್ನೆ ಮಾಡಿರೋದಂತೂ ನಿಜ.

ದೇಶ-ವಿದೇಶ
ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ
ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.