ದೆಹಲಿ, ಅ. 14: ಈಗಾಗಲೇ ಕೋವಿಡ್‌ನಿಂದ ಪೂರ್ಣ ಚೇತರಿಕೆ ಕಂಡ ಸುಮಾರು ಶೇ. 75ರಷ್ಟು ಜನರಲ್ಲಿ ವಾರಗಳ ಕಾಲ ಅಥವಾ ತಿಂಗಳು ಕಾಲ ದೀರ್ಘಕಾಲದ ರೋಗ ಲಕ್ಷಣಗಳು ಹೊಂದಿರುತ್ತವೆ ಎಂಭ ಆಘಾತಕಾರಿ ಮಾಹಿತಿಯನ್ನು ಸಂಶೋಧನೆಗಳು ಹೊರಹಾಕಿವೆ,
ಅನೇಕ ರೋಗಿಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಈ ರೋಗಿಗಳಿಗೆ ಶುದ್ಧ ಆಮ್ಲಜನಕ ಮಟ್ಟದಲ್ಲಿನ ಕುಸಿತ ಎಚ್ಚರಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇನ್ನೂ ಕೆಲವರಿಗೆ ದೇಹದಿಂದ ವೈರಸ್ ಕಡಿಮೆಯಾದ ನಂತರವೂ ಉಸಿರಾಟದ ತೊಂದರೆ ಮತ್ತು ಕಡಿಮೆ ಆಮ್ಲಜನಕದ ಶುದ್ಧತ್ವವು ಕಾಣಿಸಿಕೊಳ್ಳಬಹುದು. ಈ ಬಗ್ಗೆ JAMA (ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್) ಮತ್ತು ಇಟಲಿಯ ವೈದ್ಯರ ಒಂದು ಗುಂಪಿನ ನಿಯಂತ್ರಿತ ಅಧ್ಯಯನದಲ್ಲಿ ಇದು ಉಲ್ಲೇಖವಾಗಿರುವುದನ್ನು ಕಾಣಬಹುದು.
ಕರೋನದಿಂದ ಚೇತರಿಸಿಕೊಂಡ ಸಾಮಾನ್ಯರಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ತುಂಬಾ ಸಾಮಾನ್ಯವಾಗಿದ್ದು, ರೋಗಿಗಳಿಗೆ ಉಸಿರಾಟವನ್ನು ಸಮತೋಲನಗೊಳಿಸಲು ಮತ್ತು ಪ್ರಮುಖ ಕಾರ್ಯಗಳನ್ನು ಬೆಂಬಲಿಸಲು ದೀರ್ಘಕಾಲದವರೆಗೆ ನೆರವಿನ ಆಮ್ಲಜನಕದ ಅಗತ್ಯವಿರುತ್ತದೆ ಎನ್ನಲಾಗಿದೆ.
ಇವೆಲ್ಲದರ ನಡುವೆ ಕರೋನನಿಂದ ಚೇತರಿಸಿಕೊಂಡ ರೋಗಿಗಳು ಮತ್ತೆ ಕೋವಿಡ್ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಕರೋನದಿಂದ ಚೇತರಿಕೆ ಕಂಡರವರಲ್ಲಿ ಚಿಕಿತ್ಸೆ ಫಲಕಾರಿಯಾದ ನಂತರದ ಆಯಾಸವು ಸಾಮಾನ್ಯ ಉಸಿರಾಟದ ಜೊತೆಗೆ ಆಯಾಸ ಮತ್ತು ದಣಿವಿನ ಕಾಯಿಲೆಯು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ದೇಹದಲ್ಲಿನ SARS-COV-2 ವೈರಸ್‌ನ ತ್ವರಿತ ಮತ್ತು ಹರಡುವಿಕೆಯ ಪರಿಣಾಮವಾಗಿ ಇದು ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಕೋವಿಡ್ ನಂತರದ ಆಯಾಸ, ಆಲಸ್ಯ, ಸ್ನಾಯು ನೋವು, ಮಂದತೆ ಮತ್ತು ತೀವ್ರ ದೌರ್ಬಲ್ಯ ಹಾಗೂ ಬಳಲಿಕೆ ಕಂಡು ಬರುತ್ತದೆ ಎನ್ನಲಾಗಿದೆ.