Visit Channel

ಕೋವಿಡ್ ೧೯ ಹೋಮ್ ಕ್ವಾರಂಟೈನ್ ಬೀಟ್ ಟ್ರಾö್ಯಕರ್ ಮೂಲಕ ಕ್ವಾರಂಟೈನ್‌ಗಳ ಟ್ರಾö್ಯಕಿಂಗ್

corona-virus-getty

ಸೋಂಕಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕೇಂದ್ರ, ರಾಜ್ಯ ಸರಕಾರಗಳು ಆತಂಕಕ್ಕೆ ಒಳಗಾಗಿವೆ. ಈ ನಿಟ್ಟಿನಲ್ಲಿ ಸಾವಿರಾರು ಮಂದಿ ಹೋಮ್ ಕ್ವಾರಂಟೈನ್ ಅಂದರೆ ಮನೆಯಲ್ಲೇ ನಿಗಾ ವ್ಯವಸ್ಥೆ ಮೂಲಕ ಇದ್ದಾರೆ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಹೀಗೆ ಹೋಮ್ ಕ್ವಾರಂಟೈನ್ ಆಗಿರುವ ಕೆಲವು ಮಂದಿ ಸ್ಟ್ಯಾಂಪ್ ಹಾಕಿದ್ದರೂ ಬೇಕಾಬಿಟ್ಟಿ ಓಡಾಟ ನಡೆಸುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ. ಇವರ ಮೇಲೆ ನಿಗಾ ವಹಿಸಲು ಸುಧಾರಿತ ಆಪ್ ನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಿನಿವಿಧಾನ ಸೌಧದಲ್ಲಿರುವ ವಾರ್ ರೂಮ್ ನಲ್ಲಿ ಬಿಡುಗಡೆ ಗೊಳಿಸಿದರು.

ಕ್ವಾರಂಟೈನ್ ಗಳನ್ನು ಮನೆಯಲ್ಲೇ ನಿಗಾ ಇರಿಸಲು ಕುಟುಂಬ, ಪೊಲೀಸರು, ಆಶಾ ಕಾರ್ಯಕರ್ತರು, ವೈದ್ಯರು ಹರಸಾಹಸ ಪಡುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕು ಆಡಳಿತ, ಶ್ರಮಿಕ ಬೆಳ್ತಂಗಡಿ ಶಾಸಕರ ಕಚೇರಿ ಹಾಗೂ ಐ-ಸರ್ಚ್ ಕಂಪೆನಿಯ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಜಿಪಿಎಸ್ ಆಧಾರಿತ ಕೋವಿಡ್ ೧೯ ಹೋಮ್ ಕ್ವಾರಂಟೈನ್ ಬೀಟ್ ಟ್ರಾö್ಯಕರ್ ಬಳಸಿ ನಿಗಾ ವಹಿಸುವ ಕಾರ್ಯಕ್ಕೆ ಮುಂದಾಗಿದೆ. ಇದು ತಾಲೂಕಿನಲ್ಲಿ ಮಾತ್ರವಲ್ಲದೆ ದೇಶದಲ್ಲೇ ಮೊದಲ ಪ್ರಯತ್ನ ಇದಾಗಿದೆ.

ಈಗಾಗಲೇ ಇದರ ಪೂರ್ವ ಸಿದ್ಧತೆ ಮುಗಿದಿದ್ದು ತಾಲೂಕಿನಲ್ಲಿ ಒಂದು ಕೋವಿಡ್- ೧೯ ಪ್ರಕರಣ ಬೆಳಕಿಗೆ ಬಂದ ಬಳಿಕ ಹೋಮ್ ಕ್ವಾರಂಟೈನ್ ಆಗಿರುವವರ ಮೇಲೆ ನಿಗಾ ಇರಿಸಲು ಈ ವ್ಯವಸ್ಥೆ ನೆರವಾಗಲಿದೆ. ಜಿಪಿಎಸ್ ಆಧಾರಿತ ಆಪ್ ಮೂಲಕ ವಾರ್ ರೂಮಲ್ಲಿ ಕೂತು ಹೋಮ್ ಕ್ವಾರಂಟೈನ್ ಆಗಿರುವವರು ಎಲ್ಲಿದ್ದಾರೆ ಹೇಗಿದ್ದಾರೆ ಮತ್ತು ಅವರ ಭಾವಚಿತ್ರ ಸಹಿತ ಮಾಹಿತಿಯನ್ನು ಇದರಿಂದ ಪಡೆಯಬಹುದಾಗಿದೆ. ಸದ್ಯ ಇದನ್ನು ಬೆಳ್ತಂಗಡಿ ತಾಲೂಕಿನಲ್ಲಿ ಜಾರಿಗೆ ತರಲಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಜಾರಿಗೆ ತರಲು ಚಿಂತಿಸಲಾಗಿದೆ.

ಕೋವಿಡ್-೧೯ ಕ್ವಾರಂಟೈನ್ ಟ್ರ‍್ಯಾಕರ್ ಆಪ್ ಜಿಪಿಎಸ್ ಆಧಾರಿತ ಮೊಬೈಲ್ ಆಪ್ ಆಗಿದ್ದು ತಾಲೂಕು ಆರೋಗ್ಯಧಿಕಾರಿ, ತಹಶೀಲ್ದಾರ್, ವೃತ್ತ ನಿರೀಕ್ಷಕರು ಇದರ ಮೇಲುಸ್ತುವಾರಿ ವಹಿಸಲಿದ್ದಾರೆ. ಬೀಟ್ ಪೊಲೀಸ್ ಅವರ ಸ್ಮಾರ್ಟ್ ಫೋನ್ ಗಳಿಗೆ ಆಪ್ ಅಳವಡಿಕೆ ಮಾಡಲಾಗುತ್ತದೆ. ಸ್ಥಳಕ್ಕೆ ಭೇಟಿ ನೀಡುವ ಬೀಟ್ ಪೊಲೀಸರು ಮನೆ ಮತ್ತು ಶಂಕಿತನ ಭಾವಚಿತ್ರ ಪಡೆದು ಅಪ್ ಡೇಟ್ ಮಾಡಬೇಕಿದೆ. ಒಂದು ವೇಳೆ ಸ್ಥಳದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದಲ್ಲಿ ನೆಟ್ವರ್ಕ್ ಬಂದ ಬಳಿಕ ಅವರ ವಿವರಗಳು ಅಪ್ಡೇಟ್ ಆಗಲಿದೆ. ಇದರಿಂದ ಹೋಮ್ ಕ್ವಾರಂಟೈನ್ ನ ಸಂಪೂರ್ಣ ಚಿತ್ರಣ ಲಭ್ಯವಾಗಲಿದ್ದು ಪ್ರತಿ ದಿನ ಪೊಲೀಸ್ ಭೇಟಿ ನೀಡಿರುವ ಕುರಿತು ಮಾಹಿತಿ ಲಭ್ಯವಾಗಲಿದೆ. ಕ್ವಾರೆಂಟೆನ್, ಪಾಸಿಟಿವ್, ನೆಗೆಟಿವ್, ೧೪ ದಿನಗಳ ಬಳಿಕದ ವರದಿ ಮನೆಯಲ್ಲಿ ಇಲ್ಲದಿದ್ದರೆ, ಅವರೊಂದಿಗೆ ಜಾಸ್ತಿ ಜನ ಸಂಪರ್ಕದಲ್ಲಿದ್ದರೆ ಹೈ ಅಲರ್ಟ್ ಎಂದು ವರದಿ ನೀಡಿದರೆ ಮೇಲುಸ್ತುವಾರಿಗಳ ದೂರವಾಣಿ ಸಂಖ್ಯೆಗೆ ತಕ್ಷಣ ಸಂದೇಶ ರವಾನೆಯಾಗಲಿದೆ. ತಕ್ಷಣ ಜಾಗೃತರಾಗಬಹುದಾಗಿದೆ.

ಸಾರ್ವಜನಿಕರಿಗೆ ಅವರ ಅಸುಪಾಸಿನಲ್ಲಿ ಇದ್ದವರ ಮಾಹಿತಿಯೂ ಇದೇ ಆಪ್ ನಿಂದ ಪಡೆಯಬಹುದು. ಒಟ್ಟು ೮೧ ಗ್ರಾಮದ ಡೇಟಾ ಸಿಗಲಿದ್ದು, ಇದರಿಂದ ಸ್ಥಳೀಯರು ಸೋಂಕಿತನ ಮೇಲೆ ನಿಗಾದಲ್ಲಿರಬಹುದಾಗಿದೆ. ಕಿಯೋನಿಕ್ಸ್ ನ ಆಪ್ ಅಭಿವೃದ್ಧಿ ಸಂಯೋಜಕರಾದ ಅರವಿಂದ್ ಭಟ್ ಮತ್ತು ಬಾಲಕೃಷ್ಣ ಶೆಟ್ಟಿ ಹೊಸ ಆಪ್ ಅಭಿವೃದ್ಧಿ ಪಡಿಸಿದ್ದಾರೆ. ಕೋವಿಡ್ ೧೯ ಗೃಹ ಪರಿವೀಕ್ಷಣಾ ( ಕ್ವಾರಂಟೈನ್) ಆಗಿರುವಂತವರ ವರದಿ ಪಡೆಯಬಹುದಾದ ಆಪ್ ಲೋಕಾರ್ಪಣೆಗೊಂಡಿದೆ. ತಾಲೂಕಿನ ೨೨೦ ಮಂದಿಯ ಮೇಲೆ ನಿಗಾ ಇಡಲು ಸಹಕಾರಿಯಾಗಲಿದೆ. ಇದು ದೇಶದಲ್ಲೆ ಮೊದಲಬಾರಿಗೆ ಪರಿಚಯಿಸಿದ್ದು. ದೇಶದೆಲ್ಲೆಡೆ ಈ ಆಪ್ ಬಳಸುವ ಮೂಲಕ ಕೊರೊನಾ ಶಂಕಿತರ ಮೇಲೆ ನಿಗಾ ಇಟ್ಟು ಕೊರೊನಾ ಮುಕ್ತ ದೇಶವಾಗಿಸಲು ಸಹಕಾರಿಯಾಗಲಿದೆ.ಎಂದು ಆಪ್ ಬಿಡುಗಡೆಗೊಳಿಸಿ ಶಾಸಕ ಹರೀಶ್ ಪೂಂಜ ಹೇಳಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರೀ,ಆರೋಗ್ಯಾಧಿಕಾರಿ ಕಲಾಮದು,ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ಉಪಸ್ಥಿತರಿದ್ದರು.

Latest News

Bilkis Bano
ದೇಶ-ವಿದೇಶ

ಬಿಲ್ಕಿಸ್ ಬಾನೊ ಪ್ರಕರಣ ; ಅಪರಾಧಿಗಳನ್ನು ಬಿಡುಗಡೆ ಮಾಡದಂತೆ 6,000 ಮಾನವ ಹಕ್ಕುಗಳ ಕಾರ್ಯಕರ್ತರು, ಇತಿಹಾಸಕಾರರಿಂದ ಸುಪ್ರೀಂಗೆ ಪತ್ರ!

ವಿದ್ವಾಂಸರು, ಚಲನಚಿತ್ರ ನಿರ್ಮಾಪಕರು, ಪತ್ರಕರ್ತರು ಮತ್ತು ಮಾಜಿ ಅಧಿಕಾರಗಳು ಈ ಪತ್ರಕ್ಕೆ ಸಹಿ ಹಾಕಿ, ಅಪರಾಧಿಗಳನ್ನು ಬಿಡುಗಡೆ ಮಾಡದಂತೆ ಕೋರಿದ್ದಾರೆ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಬೇರೆ ರಾಜ್ಯದವರು ಮತ ಚಲಾಯಿಸಬಹುದು ; ಕಣಿವೆ ರಾಜ್ಯದ ಹೊಸ ಚುನಾವಣಾ ನಿಯಮಗಳ ವಿವರ ಇಲ್ಲಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಸ್ಥಳೀಯರಲ್ಲದವರು ಸೇರಿದಂತೆ ಯಾವುದೇ ಭಾರತೀಯ ನಾಗರಿಕರು ತಮ್ಮ ಹೆಸರನ್ನು ಮತದಾನ ಪಟ್ಟಿಯಲ್ಲಿ ಸೇರಿಸಬಹುದು.

Dolo 650
ದೇಶ-ವಿದೇಶ

ಡೋಲೋ 650 ಮಾತ್ರೆ ಬರೆಯಲು ವೈದ್ಯರಿಗೆ 1000 ಕೋಟಿ ರೂ. ಲಂಚ! : ಸುಪ್ರೀಂಗೆ ದೂರು

ಡೋಲೋ 650 ಮಾತ್ರೆ ಉತ್ಪಾದಕ ಕಂಪನಿಯೂ ಅಂದಾಜು 1000 ಕೋಟಿ ರೂಪಾಯಿಗಳನ್ನು ವೈದ್ಯರಿಗೆ ನೀಡಿದೆ ಎಂದು ವೈದ್ಯಕೀಯ ಮಾರಾಟ ಪ್ರತಿನಿಧಿಗಳ ಸಂಘವು ಆರೋಪಿಸಿದೆ.

Kannada
ಮನರಂಜನೆ

2000-2010ರ ಸಾಲಿನ ಕನ್ನಡ ಚಿತ್ರರಂಗದ ಟಾಪ್ 12 ಚಿತ್ರಗಳು ಯಾವುವು ಗೊತ್ತಾ? ಇಲ್ಲಿದೆ ಓದಿ

ಆ ಕಾಲಕ್ಕೆ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಈ ಸಿನಿಮಾ ಹಲವು ಕೇಂದ್ರಗಳಲ್ಲಿ ಯಶಸ್ವಿಯಾಗಿ 25 ವಾರಕ್ಕೂ ಅಧಿಕ ಸಮಯ ಪ್ರದರ್ಶನ ಕಂಡಿತ್ತು.