Visit Channel

ಕೋಸ್ಟಲ್ ವುಡ್ ನಿರ್ದೇಶಕ ಉದಯ ಶೆಟ್ಟಿ ಆರೆಸ್ಟ್

jagan

ಮಂಗಳೂರು: ಆಂದ್ರ ಪ್ರದೇಶದ ಸಿ ಎಂ ರಿಲೀಪ್ ಫಂಡ್ ಗೆ ಕನ್ನ ಹಾಕಲು ಹೊರಟ ಕೋಸ್ಟಲ್ ವುಡ್ ನಿರ್ದೇಶಕ ಉದಯ್ ಕುಮಾರ್ ಶೆಟ್ಟಿ  ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಉದಯ್ ಶೆಟ್ಟಿ ಕಾಂತಾವರ,  ಮೂಡಬಿದಿರೆಯ ಯೋಗೀಶ್ ಆಚಾರ್ಯ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ ಸುವರ್ಣ ಬಂಧಿತ ಆರೋಪಿಗಳಾಗಿದ್ದು ಇನ್ನಿಬ್ಬರ ಹೆಸರನ್ನು ಪೊಲೀಸರು ತಿಳಿಸಿಲ್ಲ. ಆಂದ್ರ ಸಿ ಎಂ ಖಾತೆಯಿಂದ ಒಂದೇ ಸಲ ಬರೋಬ್ಬರಿ 58 ಕೋಟಿ ರೂ ವಿತ್ ಡ್ರಾ ಆಗುತ್ತಿರುವ ವಿಚಾರ  ತಿಳಿಯುತ್ತಿದ್ದಂತೆ ಬ್ಯಾಂಕ್ ಸಿಬ್ಬಂಧಿಗಳಿಗೆ ಅನುಮಾನ ಮೂಡಿದೆ.

 ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಆಂದ್ರ ಸರ್ಕಾರಕ್ಕೆ ಕರೆ ಮಾಡಿ ಮಾತಾಡಿದ್ದಾರೆ.  ಈ ವೇಳೆ ಆಂದ್ರ ಸಿ ಎಂ ಕಚೇರಿ ಅಷ್ಟು ಮೊತ್ತದ ಚೆಕ್ ಯಾರಿಗೂ ಕೊಟ್ಟಿಲ್ಲವೆಂದು ಸ್ಪಷ್ಟನೆ ನೀಡಿದೆ. ಬ್ಯಾಂಕ್ ಮ್ಯಾನೇಜರ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

 ಒಂದೊಂದು ರೂಪಾಯಿಗೂ ಕಷ್ಟ ಪಡುತ್ತಾ ಒಂದು ದಿನದ ಊಟಕ್ಕೆ ಪರದಾಡುವ ಜನ ಒಂದು ಕಡೆಯಾದರೆ, ಒಂದೇ ದಿನದ ರಾತ್ರಿ ಶ್ರೀಮಂತರಾಗಲು ಯಾರ್ಯಾರದೋ ಖಾತೆಗಳಿಗೆ ಕನ್ನ ಹಾಕುವ ಜನ ಇನ್ನೊಂದೆಡೆ.  6 ಜನ ಖದೀಮರ ತಂಡ ನಕಲಿ ಚೆಕ್ ಬಳಕೆ ಮಾಡಿಕೊಂಡು ಹಣ ವಿತ್ ಡ್ರಾ ಮಾಡಲು ಮುಂದಾಗಿ ಪೊಲೀಸ್ ಅಥಿತಿಯಾಗಿದ್ದಾರೆ.  ಈ 6 ಜನ ಖದೀಮರು ಹಲವು ವರ್ಷಗಳಿಂದ ಇಂತಹ ದಂಧೆಯಲ್ಲಿ ತೊಡಗಿರುವುದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.