ಮಂಗಳೂರು: ಮಂಗಳೂರು ಮೂಲದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀಗೆ ಸಿಸಿಬಿ ಪೋಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ ಪ್ರಕರಣದಲ್ಲಿ ಮಂಗಳೂರಿನಲ್ಲಿ ಡಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಅವರ ಆಪ್ತ ತರುಣ್ ಅವರನ್ನು ಬಂಧಿಸಿದ್ದರು. ಈ ತರುಣ್ ಅವರನ್ನು ತೀರ್ವ ವಿಚಾರಣೆಗೆ ಒಳಪಡಿಸಿದ್ದು, ತರುಣ್ ಅವರು ಸಿಸಿಬಿ ಪೋಲೀಸರ ಮುಂದೆ ನಿರೂಪಕಿ ಅನುಶ್ರೀ ಅವರ ಹೆಸರನ್ನು ಬಹಿರಂಗಪಡಿಸಿದ್ದಾನೆ.
ತರುಣ್ ನೀಡಿದ ಮಾಹಿತಿಯನ್ನು ಅನುಸರಿಸಿ ಮಂಗಳೂರಿನ ಸಿಸಿಬಿ ಪೋಲೀಸರು ಖ್ಯಾತ ನಿರೂಪಕಿ ಅನುಶ್ರೀ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದಾರೆ ಈ ಮೂಲಕ ಅನುಶ್ರೀ ಅವರಿಗೂ ಡ್ರಗ್ಸ್ ಸಂಕಷ್ಟ ಎದುರಾಗಲಿದೆಯೇ ನೋಡಬೇಕಾಗಿದೆ.