ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಶ್ರೀದೇವಿಯನ್ನೂ ಮೀರಿಸುತ್ತಾಳೆ ಅಂತ ಬಾಲಿವುಡ್ ಮಂದಿ ಮಾತನಾಡಿಕೊಳ್ತಿರುವಾಗಲೇ ಅಂತಹ ವಿಭಿನ್ನ ಪಾತ್ರದಲ್ಲಿ ಜಾಹ್ನವಿ ಮಿಂಚಲು ರೆಡಿಯಾಗಿದ್ದಾರೆ. ದಢಕ್ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟ ಈ ಸುಂದರಿ, ಸದ್ಯ ಧರ್ಮ ಪ್ರೊಡಕ್ಷನ್ ನಿರ್ಮಾಣ ಮಾಡಿ, ಶರಣ್ ಶರ್ಮಾ ನಿರ್ದೇಶನ ಮಾಡುತ್ತಿರುವ `ಗುಂಜಾನ್ ಸಕ್ಸೇನಾ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ..ಈಗಾಗಲೇ ಚಿತ್ರದ ಫಸ್ಟ್ ಲುಕ್ ಕೂಡಾ ರಿಲೀಸ್ ಆಗಿದೆ..
ಭಾರತದ ಮೊದಲ ವಾಯುಪಡೆಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಹೊಂದಿರುವ ಗುಂಜಾನ್ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದರು. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ವಾಯಪಡೆಯನ್ನ ಮುನ್ನಡೆಸಿದ ಮಹಿಳಾ ಅಧಿಕಾರಿ ಗುಂಜಾನ್ ಸಕ್ಸೇನಾ. ಕಾರ್ಗಿಲ್ ಹುಡುಗಿ ಎಂದೇ ಈಕೆಯನ್ನ ಗುರುತಿಸಲಾಗುತ್ತೆ.
ಇಂತಹ ಸಾಧಕಿಯ ಪಾತ್ರವನ್ನು ಜಾಹ್ನವಿ ಕಪೂರ್ ನಿರ್ವಹಿಸಲಿದ್ದು, ಈಗಿನ್ನೂ ಚಿತ್ರದ ಘೋಷನೆಯಾಗಿದೆ. ಮುಂದಿನ ವರ್ಷ ಮಾರ್ಚ್ 13ರಂದು ಈ ಚಿತ್ರವನ್ನು ತೆರೆಗೆ ತರಲಿದ್ದಾರಂತೆ.