ಜಿಲ್ಲಾ ಮತ್ತು ತಾಲ್ಲೂಕು ಆಡಳಿತ, ಚುನಾಯಿತ ಪ್ರತಿನಿಧಿಗಳು, ಗಣ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೊರೋನಾ ಹರಡುವಿಕೆ ನಿಯಂತ್ರಿಸಲು ಮುಂದಾಗಿದ್ದು; . ಗುರುವಾರ ಪಾದಯಾತ್ರೆ ನಡೆಸಲಿದ್ದಾರೆ.
ರಾಜ್ಯ ಸರ್ಕಾರ ಈ ದಿನವನ್ನು ಮಾಸ್ಕ್ ದಿನವನ್ನಾಗಿ ಪರಿಗಣಿಸಿದ್ದು ಜನಜಾಗೃತಿ ಮೂಡಿಸಿಲು ಮುಂದಾಗಿದೆ. ಇನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶಿಸಿದ್ದಾರೆ.
ನಾಳೆ ನಡೆಯುವ ಪಾದಯಾತ್ರೆಯಲ್ಲಿ ಮಾಸ್ಕ್ ಕಡ್ಡಾಯವಾಗಿದೆ, ಸಾಮಾಜಿಕ ಅಂತರ ಕಾಪಾಡೋದು , ಸಾನಿಟೈಸರ್ ಬಳಸೋದು ಅಗತ್ಯವಾಗಿದೆ. ಇದೆಲ್ಲದರ ಬಳಕೆ ಹಾಗೂ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸೋದು ಈ ಪಾದಾಯಾತ್ರೆಯ ಉದ್ದೇಶವಾಗಿದೆ.
ಮಾಸ್ಕ್ ದಿನಾಚರಣೆಯ ಈ ಪಾದಾಯಾತ್ರೆಯಲ್ಲಿ ಯಾವುದೇ ಕಾರಣಕ್ಕೂ ೩೦ ಜನರಿಗಿಂತ ಹೆಚ್ಚು ಜನ ಒಂದೇ ಕಡೆ ಸೇರೋ ಹಾಗಿಲ್ಲ ಅನ್ನೋದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.