Visit Channel

ಗ್ಯಾಂಗ್‌ರೇಪ್‌ಗೆ ಬೆಚ್ಚಿಬಿದ್ದ ಸಾಂಸ್ಕೃತಿಕ ನಗರಿ : ಮೂವರು ಶಂಕಿತರು ವಶಕ್ಕೆ

rape-1-780x405

ಮೈಸೂರು ಆ26 : ಮೈಸೂರು ನಗರದ ಹೆಲಿಪ್ಯಾಡ್ ಬಳಿಯ ವಾಟರ್ ಟ್ಯಾಂಕ್​​​​ನ ಗುಡ್ಡದ ಬಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ನಿನ್ನೆ ಸಂಜೆ 7 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಈ ಘಟನೆಯಿಂದ ಇಡೀ ಸಾಂಸ್ಕೃತಿಕ ರಾಜಧಾನಿಯೇ ಬೆಚ್ಚಿಬಿದ್ದಿದೆ.

ಉತ್ತರ ಭಾರತ ಮೂಲದ ಯುವತಿ ನಗರದ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದು ನಿನ್ನೆ ಸೇಹಿತನ ಜೊತೆಗೆ ವಾಟರ್ ಟ್ಯಾಂಕ್​​​​ನ ಗುಡ್ಡದ ಬಳಿ ಕುಳಿತಿದ್ದ ಸಂದರ್ಭದಲ್ಲಿ ಸುಮಾರು 5 ಜನ ಕಾಮುಕರು ಆಗಮಿಸಿ ಯುವಕ ತಲೆಗೆ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿ ನಂತರ ಕಾಮುಕರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸದ್ಯ ಯುವತಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಗೃಹ ಸಚಿವ ಈ ಪ್ರಕರಣವನ್ನು  ಗಂಭೀರವಾಗಿ ಪರಿಗಣಿಸಿದ್ದೇನೆ  ಗುರುವಾರ  ನಾನು ಮೈಸೂರಿಗೆ ಭೇಟಿ ನೀಡಲಿದ್ದೇನೆ. ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ. ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಪ್ರಕರಣದ ಬಗ್ಗೆ ಮೈಸೂರು ಪೊಲೀಸ್ ಕಮಿಷನ್ ರಿಂದ ಮಾಹಿತಿ ಪಡೆದಿದ್ದಾನೆ. ದೂರವಾಣಿ ಮೂಲಕ ಘಟನೆ ಬಗ್ಗೆ ವಿವರ ಪಡೆದಿದ್ದೇನೆ. ಎಂದು ಸ್ಪಷ್ಟಪಡಿಸಿದರು.

ಈ ಪ್ರಕರಣ ತನಿಖೆಗೆ ಈಗಾಗಲೇ ಎಡಿಜಿಪಿ ಪ್ರತಾಪ್ ರೆಡ್ಡಿ ಯನ್ನು ಮೈಸೂರಿಗೆ ಆಗಮಿಸಿದ್ದಾರೆ ಜೊತೆಗೆ  ಮೈಸೂರಿನಲ್ಲಿರುವ ಪೊಲೀಸ್ ಅಧಿಕಾರಿಗಳು ಕೂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೂವರು ಶಂಕಿತ ಆರೋಪಿಗಳು ವಶಕ್ಕೆ : ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇಗಾಗಲೇ ಮೂವರು ಶಂಕಿತ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಆರೋಪಿಗಳ ವಿರುದ್ದ ಕಠಿಣ ಕ್ರಮ : ಈ ಪ್ರಕರಣದ ಬಗ್ಗೆ ಮಾತನಾಡಿರು ಸಿಎಂ ಬಸವರಾಜ್ ಬೊಮ್ಮಾಯಿ  ಅತ್ಯಾಚಾರಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ಹೇಳಿಕೆ ದಾಖಲಿಸಲಾಗಿದೆ. ಅದರ ಆಧಾರದ ಮೇಲೆ ದೂರು ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಕಠಿಣ ಕ್ರಮ ಕೈಗೊಳ್ಳಲು ಡಿಜಿಪಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.