ಬೆಂಗಳೂರು, ನ. 4: ಈಗಾಗಲೇ ನವೆಂಬರ್ 1ರಿಂದ ಎಲ್ ಪಿಜಿ ಬುಕಿಂಗ್ ನಲ್ಲಿ ಹಲವಾರು ಬದಲಾವಣೆಳನ್ನು ತಂದಿದ್ದು, ಎಲ್‌ಪಿಜಿ ಬುಕ್ಕಿಂಗ್ ಮಾಡುವುದಕ್ಕೆ ಬಳಕೆ ಮಾಡುವ ನಂಬರ್ ಸಹ ಬದಲಾವಣೆಯಾಗಿದೆ. ಇದರ ಜೊತೆಗೆ ಒಟಿಪಿ ಸೌಲಭ್ಯವನ್ನು ಕೂಡ ಇದು ನೀಡಿದೆ. ಇದು ಅನೇಕರಿಗೆ ಸಹಕಾರಿಯಾಗಿದೆ. ಜಗತ್ತು ಡಿಜಿಟಲೀಕರಣಕ್ಕೆ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಭಾರತದಲ್ಲಿಯೂ ಒಂದೊಂದೇ ಸೇವೆಗಳು ಡಿಜಿಟಲೀಕರಣಕ್ಕೆ ಹೆಜ್ಜೆ ಹಾಕುತ್ತಿದೆ.
ಅದೇ ರೀತಿ ಇದೀಗ ಗ್ಯಾಸ್ ಸಿಲಿಂಡರ್‌ಗಳನ್ನು ವಾಟ್ಸ್ಯಾಪ್ ಮೂಲಕವೂ ಬುಕ್ಕಿಂಗ್ ಮಾಡುವ ಸೌಲಭ್ಯ ಜಾರಿಗೆ ತರಲಾಗಿದ್ದು, ಇದು ಜನಸ್ನೇಹಿಯಾಗಿದೆ ಎಂದರೆ ತಪ್ಪಾಗಲಾರದು. ವಾಟ್ಸ್ ಆ್ಯಪ್ ಮೂಲಕ ಸಿಲೆಂಡರ್ ಗಳನ್ನು ಬುಕ್ಕಿಂಗ್ ಮಾಡುವ ಬಗ್ಗೆ ಮಾಹಿತಿ ಹೀಗಿದೆ.
ವಿವಿಧ 5 ರೀತಿಗಳಲ್ಲಿ ಸಿಲೆಂಡರ್ ಬುಕ್ ಮಾಡಲು ಅವಕಾಶವಿದೆ.
- ಗ್ಯಾಸ್ ಏಜೆನ್ಸಿ ಡಿಸ್ಟ್ರಿಬ್ಯೂಟರ್ ಮೂಲಕ ಬುಕ್ ಮಾಡಬಹುದಾಗಿದೆ.
- ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಿಲೆಂಡರ್ ಬುಕ್ ಮಾಡಬಹುದಾಗಿದೆ.
- ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ.
- ಸಂಸ್ಥೆಯ ವಾಟ್ಸ್ ಆಪ್ ನಂಬರ್ ಗೆ ಟೆಕ್ಸ್ಟ್ ಮಾಡುವ ಮೂಲಕ ವಾಟ್ಸ್ ಆಪ್ ನಲ್ಲಿ ಬುಕ್ ಮಾಡಬಹುದಾಗಿದೆ.
5.ಇಂಡೇನ್ ಆಪ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ.