ಬೆಂಗಳೂರು, ನ. 18: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು ತಿದ್ದುಪಡಿ ಅಧಿನಿಯಮ 2014ಗಳ ಅನುಸೂಚಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 12 ನಾಗರೀಕ ಸೇವೆಗಳನ್ನು ಕರ್ನಾಟಕ ಸಕಾಲ ಸೇವೆಗಳಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗಳ ಅರ್ಜಿಗಳ್ನು ಆನ್ ಲೈನ್ ಮೂಲಕ ಸ್ವೀಕರಿಸಿ, ಸಂಸ್ಕರಿಸಿ ಮತ್ತು ವಿತರಿಸುವಂತೆ ಆನ್ ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಮ ಪಂಚಾಯ್ತಿಗಳಿಗೆ ಪಾವತಿಸಬೇಕಾಗಿರುವ ಆಸ್ತಿ ತೆರಿಗೆ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಲು ನಾಗರೀಕರಿಗೆ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದ ಮೂಲಕ ಅವಕಾಶ ಕಲ್ಪಿಸಲಾಗಿದೆ.
ಗ್ರಾಮಪಂಚಾಯ್ತಿಗಳಲ್ಲಿ ನಾಗರೀಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಂಶದಲ್ಲಿ ನೊಂದಣಿ ಮಾಡದೇ ಸಕಾಲ ಅಧಿನಿಯಮದ ಉಲ್ಲಂಘನೆಯನ್ನು (ಸಕಾಲ ತಂತ್ರಾಂಶವನ್ನು By Pass) ತಡೆಗಟ್ಟಲು ಸಕಾಲ ಅರ್ಜಿ ಸಂಖ್ಯೆ ( GSC ಸಂಖ್ಯೆ) ಇಲ್ಲದೇ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಡಿಜಿಟಲ್ ಸಹಿ ಇಲ್ಲದೇ ವಿತರಿಸಲಾಗುವ ಯಾವುದೇ ಪ್ರಮಾಣ ಪತ್ರಗಳಿಗೆ ಕಾನೂನು ಬದ್ಧವಾಗಿ ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ.
ಈ ಹಿನ್ನಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಈ ಕೆಳಕಂಡ ಸಕಾಲ ಸೇವೆಗಳ ಅರ್ಜಿ ಸ್ವೀಕೃತಿ, ವಿಲೇವಾರಿ ಹಾಗೂ ಪ್ರಮಾಣ ಪತ್ರ ವಿತರಣೆಗಾಗಿ ಮತ್ತು ಆನ್ ಲೈನ್ ಮೂಲಕ ತೆರಿಗೆ ಪಾವತಿಗಾಗಿ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದ ಬಳಕೆಯನ್ನು ಕಡ್ಡಾಯಗೊಳಿಸಿ, ಬಾಪೂಜಿ ಸೇವಾ ಕೇಂದ್ರ ತಂತ್ರಾಂಶವನ್ನು ಅನುಷ್ಠಾನಗೊಳಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಈ 12 ನಾಗರೀಕ ಸೇವೆಗಳು ಸಕಾಲ ಸೇವೆಯಡಿ ಲಭ್ಯ:
- ಆಸ್ತಿ ತೆರಿಗೆ
- ವಾಣಿಜ್ಯ ಪರವಾನಗಿ
- ಕಟ್ಟಡ ಪರವಾನಗಿ
- ರಸ್ತೆ ಅಗೆವುದಕ್ಕಾಗಿ ಅನುಮತಿ
- ಕುಡಿಯುವ ನೀರಿನ ನಿರ್ವಹಣೆ
- ಬೀದಿ ದೀಪಗಳ ನಿರ್ವಹಣೆ
- ಗ್ರಾಮ ನೈರ್ಮಲ್ಯ ನಿರ್ವಹಣೆ
- ಅಕುಶಲ ಕಾರ್ಮಿಕರಿಗೆ ಉದ್ಯೋಗ
- ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿ