ಹನೋಯ್, ಅ. 30: ವಿಯೆಟ್ನಾಂನಲ್ಲಿ ಭೀಕರ ಚಂಡಮಾರುತ ಹಾಗೂ ಭೂಕುಸಿತವಾಗಿದ್ದು, 46 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 50 ಕ್ಕೂ ಹೆಚ್ಚು ಜನ ನಾಪತ್ತೆಯಾಗಿರುವ ಘಟನೆ ಮಧ್ಯ ವಿಯೆಟ್ನಾಂನಲ್ಲಿ ನಡೆದಿದೆ.
ವಿಯೆಟ್ನಾಂನ ಕೌಂಗ್ ನಮ್ ಪ್ರಾಂತ್ಯದ ಟ್ರಾ ವ್ಯಾನ್ ಮತ್ತು ಟ್ರಾಲೆಂಗ್ ಗ್ರಾಮಗಳಲ್ಲಿ ಭಾರೀ ಚಂಡಮಾರುತ ಮತ್ತು ಮಳೆಯಿಂದಾಗಿ ಗುಡ್ಡಗಳು ಉರುಳಿ ಭೂ ಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ 46 ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ 35 ಕ್ಕೆ ಹೆಚ್ಚು ಶವಗಳನ್ನು ಹೊರ ತೆಗೆಯಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದೆ.