ಮೈಸೂರು, ಅ. 24: ʻಪೆಟ್ರೋ ಮ್ಯಾಕ್ಸ್ʼ ಶೂಟಿಂಗ್ಗಾಗಿ ಮೈಸೂರಿಗೆ ಆಗಮಿಸಿರುವ ಹರಿಪ್ರಿಯಾ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದ ಫೋಟೊವನ್ನು ಟ್ವಿಟರ್ನಲ್ಲಿ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಜೊತೆಗೆ ಮೈಸೂರಿನ ಜನತೆಗೆ ನವರಾತ್ರಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಹರಿಪ್ರಿಯಾ ಶುಕ್ರವಾರ ಸಂಜೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ‘ನೀರ್ದೋಸೆ’ ನಿರ್ದೇಶಕ ವಿಜಯ ಪ್ರಸಾದ್ ಅವರ ಹೊಸ ಸಿನಿಮಾ ʻಪೆಟ್ರೋಮ್ಯಾಕ್ಸ್ʼ ಚಿತ್ರದ ಶೂಟಿಂಗ್ ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ನಡೆಯುತ್ತಿದೆ. ನಟ ಸತೀಶ್ ನೀನಾಸಂ ಸಿನಿಮಾದ ನಾಯಕ ನಟರಾಗಿದ್ದಾರೆ. ಹರಿಪ್ರಿಯಾ ನಾಯಕಿಯಾಗಿದ್ದಾರೆ.