ನ್ಯಾವಿಗೇಷನ್ ಕೊನೆಯ ಉಪಗ್ರಹವನ್ನು ಚೀನಾ ಮಂಗಳವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಪಥದರ್ಶಕ ಉಪಗ್ರಹ ವ್ಯವಸ್ಥೆಯ (ನ್ಯಾವಿಗೇಷನ್) ಉಡಾವಣೆ ಮೂಲಕ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ಹೊಂದಿರುವ ಅಮೆರಿಕದ ವಿರುದ್ಧ ಪ್ರಬಲ ಸ್ಪರ್ಧೆಯನ್ನು ಚೀನಾ ನೀಡಲಿದೆ. ಈ ಉಪಗ್ರಹ ಉಡಾವಣೆ ಮೂಲಕ ಬಾಹ್ಯಾಕಾಶದಲ್ಲಿ ಇನ್ನಷ್ಟು ಬಲಶಾಲಿಯಾಗಲಿದೆ.
ಪಥದರ್ಶಕ ಉಪಗ್ರಹ ವ್ಯವಸ್ಥೆಯ (ನ್ಯಾವಿಗೇಷನ್) ನೌಕೆಯನ್ನು ಮಂಗಳವಾರ ಉಡಾವಣೆ ಮಾಡಿದೆ. ಈ ನೌಕೆಯು ಬಿಡೌ ಉಪಗ್ರಹ ವ್ಯವಸ್ಥೆಯ 55ನೇ ಉಪಗ್ರಹವಾಗದೆ. ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಷಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ನೌಕೆಯನ್ನು ಉಡಾವಣೆ ಮಾಡಲಾಗಿದೆ. ಈ ನೌಕೆ ಉಡಾವಣೆಯಿಂದ ಚೀನಾವು ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಬಿಡೌ ಪಥದರ್ಶಕ ಉಪಗ್ರಹ ಜಾಲ ಸಂಪೂರ್ಣಗೊಂಡಿದೆ. ಜತೆಗೆ ಈಗ ಚೀನಾ ಪಥದರ್ಶಕ ವ್ಯವಸ್ಥೆ ಹೊಂದಿರುವ ಜಗತ್ತಿನ ನಾಲ್ಕು ಪಥದರ್ಶಕ ಜಾಲಗಳಲ್ಲಿ ಒಂದೆನಿಸಿಕೊಂಡಿದೆ.
ಭಾರತ ಕೂಡ ಪಥದರ್ಶಕ ಜಾಲವನ್ನು ಅಭಿವೃದ್ಧಿ ಪಡಿಸುತ್ತಿದ್ದು ಇದಕ್ಕೆ ನಾವಿಕ್ ಎಂಬ ಹೆಸರನ್ನು ಇಟ್ಟಿದೆ. ಇನ್ನು ಅಮೆರಿಕದ ‘ಜಿಪಿಎಸ್’, ರಷ್ಯಾದ ‘ಗ್ಲೊನಾಸ್ಸ್’ ಹಾಗೂ ಐರೋಪ್ಯ ಒಕ್ಕೂಟದ ‘ಗೆಲಿಲಿಯೋ’ ಸಾಲಿಗೆ ಜೀನಾದ ಬಿಡೌ ಸೇರ್ಪಡೆಯಾಗಿದೆ.