ಕೊರೋನದ ಭೀತಿಯ ನಡುವೆಯೂ ಸರ್ಕಾರ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ನಡೆಸುವ ಹರಸಾಹಸ ಮಾಡಿದ್ದಾರೆ. ಜೂನ್ 25ರಿಂದ ಜುಲೈ 4ರವರಗೂ ನಡಯಲಿರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಪೂರ್ವ ಸಿದ್ದತೆಯನ್ನು ಸರ್ಕಾರ ಮಾಡಿಕೊಳ್ಳುತ್ತಿದೆ. ಬೇರೆ ರಾಜ್ಯಗಳಲ್ಲಿ ಪರೀಕ್ಷೆ ನಡೆಸದೆ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಇದೆ ರೀತಿ ಮಾಡಬೇಕು ಎಂದು ಹಲವು ಚರ್ಚೆಗಳನ್ನು ನಡೆಯಿತು. ಆದರೆ ರಾಜ್ಯ ಸರ್ಕಾರ ಇದ್ಯಾವುದಕ್ಕೂ ಕಿವಿ ಗೊಡಲಿಲ್ಲ.
ಪರೀಕ್ಷೆ ನಡೆಸುವ ಮುನ್ನ ಹಲವು ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಕೈ ಗೊಂಡಿದೆ. ಪರೀಕ್ಷೆಗೆ ಮುನ್ನ ಮಾಸ್ಕ್ ಧರಿಸಿ ಸ್ಯಾನಿಟೈಸರ್ ನಲ್ಲಿ ಕೈ ತೊಳೆಯುವುದು ಕಡ್ಡಾಯ. ಸಾಮಾಜಿಕ ಅಂತರ ಕಾಯ್ದಕೊಂಡು ಕೊಠಡಿಗಳನ್ನು ನಿರ್ಮಿಸಿದ್ದಾರೆ. ಮಕ್ಕಳು ಯಾರೊಂದಿಗೂ ಬೆರೆಯದಂತೆ ಮೇಲ್ವಿಚಾರಕರು ನೋಡಿಕೊಳ್ಳಬೇಕು. ಸೋಂಕಿನ ಲಕ್ಷಣ ಕಂಡು ಬರುವ ಮಕ್ಕಳನ್ನು ಕೊಠಡಿಯಳಗೆ ಬಿಡಬಾರದು ಎಂದು ಸರ್ಕಾರ ಆದೇಶವನ್ನು ಹೊರಡಿಸಿದೆ.
ದ್ವಿತೀಯ ಪಿಯುಸಿಯ ಇಂಗ್ಲೀಷ್ ಪರೀಕ್ಷೇ ಕೂಡ ಜೂನ್ 18 ರಂದು ನಡೆಯುತ್ತಿದೆ. ಪರೀಕ್ಷೆಗಿಂತ ಮಕ್ಕಳ ಆರೋಗ್ಯವೇ ಮುಖ್ಯ ಎಂಬ ಚರ್ಚೆಗಳ ನಡುವೆಯೂ ಸರ್ಕಾರದ ಈ ಕ್ರಮ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದ್ದೆ ಎಂಬುದನ್ನು ಕಾದು ನೋಡಬೇಕಾಗಿದೆ.