ಜೊತೆ ಜೊತೆಯಲಿ..ಝೀ ವಾಹಿನಿಯಲ್ಲಿ ತಿಂಗಳ ಹಿಂದಷ್ಟೇ ಪ್ರಾರಂಭವಾದ ಹೊಸ ಧಾರವಾಹಿ… ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಜತ್ಕರ್ ನಾಯಕನಾಗಿ ಹಾಗೂ ಮಂಗಳೂರು ಮೂಲದ ಮೇಘ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಧಾರವಾಹಿ ಮೊದಲ ವಾರದಲ್ಲೇ ಹೈಯೆಸ್ಟ್ ಟಿಆರ್ ಪಿ ಗಳಿಸಿಕೊಂಡು ಸದ್ದು ಮಾಡಿತ್ತು.. ಆದರೂ ‘ಜೊತೆ ಜೊತೆಯಲಿ’ ಧಾರಾವಾಹಿಗೆ ವೀಕ್ಷಕರ ಅಭಿಪ್ರಾಯ ಹೇಗಿದೆ ಅಂತ ಸ್ವತಃ ತಿಳಿದುಕೊಳ್ಳಲು ನಟಿ ಮೇಘ ಶೆಟ್ಟಿ ಜೊತೆಗೆ ನಟ ಅನಿರುದ್ಧ್ ಜತ್ಕರ್ ‘ನಮ್ಮ ಮೆಟ್ರೋ’ದಲ್ಲಿ ಪ್ರಯಾಣ ಮಾಡಿದ್ದಾರೆ.


ಫುಲ್ ರಷ್ ಇದ್ದರೂ ‘ನಮ್ಮ ಮೆಟ್ರೋ’ ಹತ್ತಿದ ಅನಿರುದ್ಧ್ ಮತ್ತು ಮೇಘ ಶೆಟ್ಟಿ, ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಜನರ ಜೊತೆಗೆ ಮಾತನಾಡಿ ತಮ್ಮ ಧಾರಾವಾಹಿಯ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ‘ಜೊತೆ ಜೊತೆಯಲಿ’ ಧಾರಾವಾಹಿ ಮತ್ತು ಅನಿರುದ್ಧ್ ನಟನೆ ಬಗ್ಗೆ ಜನರ ಪ್ರತಿಕ್ರಿಯೆ ಕಂಡು ನಟ ಅನಿರುದ್ಧ್ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ.