ಸೋಮವಾರದಂದು ದೇಶದಲ್ಲಿ ಟಿಕ್ ಟಾಕ್ ಸೇರಿದಂತೆ ಹಲವಾರು ಚೀನಿ ಆಪ್ ಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಈ ಆಪ್ ಗಳು ಚೀನಾ, ಭಾರತದ ಸಾರ್ವಭೌಮತ್ವವನ್ನು ಹಾಳು ಮಾಡುತ್ತಿತ್ತು ಎಂಬ ಸಮಜಾಯಿಶಿಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ಚೀನಾ ಭಾರತದ ನಡುವೆ ಗಲ್ವಾನ್ ಕಣಿವೆಗೆ ಸಂಬಂಧಿಸಿದಂತೆ ನಡೆದ ಘರ್ಷಣೆಯೇ ಇದಕ್ಕೆ ಕಾರಣವಾಗಿರಬಹುದು ಎಂಬ ವದಂತಿ ಕೂಡ ಇದೆ.
ಕೆಲವು ಮೂಲಗಳ ಪ್ರಕಾರ ಚೀನಾಗೆ ಕನಿಷ್ಠ 30-40% ರಷ್ಟು ಆದಾಯ ಈ ಆಪ್ ಗಳಿಂದಲೇ ಬರುತ್ತಿತ್ತು ಎನ್ನಲಾಗಿದೆ. ಸೆಪ್ಟೆಂಬರ್ ಅಷ್ಟರಲ್ಲಿ ಟಿಕ್ ಟಾಕ್ ಇಂದ ಚೀನಾ ಸುಮಾರು 100 ಕೋಟಿ ಮಾಡಿಕೊಳ್ಳುವ ಪ್ಲಾನ್ ನಲ್ಲಿ ಇತ್ತು. ಆದರೆ ಈ 59 ಆಪ್ ಬ್ಯಾನ್ ಮಾಡುವ ಮೂಲಕ ಚೀನಾದ ಆದಾಯ ಕುಸಿಯುವ ಸಾಧ್ಯತೆ ಇದೆ. ಟಿಕ್ ಟಾಕ್, ಹಲೋ ಆಪ್, ಕ್ಯಾಮ್ ಸ್ಕ್ಯಾನರ್, ಯುಸಿ ಬ್ರೌಸರ್, ಯು ಕೇಮ್ ಪರ್ಫೆಕ್ಟ್ ಸೇರಿದಂತೆ ಹಲವಾರು ಆಪ್ ಗಳನ್ನು ಭಾರತ ಬ್ಯಾನ್ ಮಾಡಿದೆ.
ಭಾರತದ ಕಾನೂನು ಮತ್ತು ನ್ಯಾಯ ಮೂರ್ತಿ ರವಿಶಂಕರ್ ಪ್ರಸಾದ್ ತಮ್ಮ ಟ್ವಿಟರ್ ಖಾತೆಯಲ್ಲಿ ಭಾರತದ ರಕ್ಷಣೆ , ಸುರಕ್ಷತೆ, ಸಾರ್ವಭೌಮತ್ವ ಹಾಗು ಸಮಾನತೆ ಯನ್ನು ಕಾಪಾಡಲು ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಬರೆದುಕೊಂಡಿದ್ದಾರೆ