ವಿಶ್ವದ ಅಗ್ರಶ್ರಯಾಂಕಿತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್, ಮುಂಬರುವ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟರ್‍ನಲ್ಲಿ ಖಚಿತಪಡಿಸಿರುವ ಜೊಕೊವಿಕ್, ಯುಎಸ್ ಓಪನ್ ಟೂರ್ನಿಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಲು ಹರ್ಷಿಸುತ್ತೇನೆ. ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುವುದು ಕುತೂಹಲ ಮೂಡಿಸಿದೆ ಎಂದಿದ್ದಾರೆ.ಕಳೆದ ಕೆಲವು ದಿನಗಳ ಹಿಂದಷ್ಟೇ ಮಾಜಿ ಚಾಂಪಿಯನ್ ರಫೆಲ್ ನಡಾಲ್, ಈ ಬಾರಿಯ ಯುಎಸ್ ಓಪನ್ ಟೂರ್ನಿಯಲ್ಲಿ ಭಾಗವಹಿಸುತ್ತಿಲ್ಲ ಎಂಬುದನ್ನು ಘೋಷಿಸಿದ್ದರು. ಆಸ್ಟ್ರೇಲಿಯಾದ ನಿಕ್ ಕ್ರಗಿಯೋಸ್ ಸಹ ಯುಎಸ್ ಓಪನ್ ಟೂರ್ನಿಯಿಂದ ಹಿಂದೆ ಉಳಿದಿರುವುದಾಗಿ ತಿಳಿಸಿದ್ದರು.