Visit Channel

ಟ್ವಿಂಕಲ್ ಖನ್ನಾ ಟ್ವೀಟ್ ಮೂಲಕ ಮೋದಿಗೆ ಟಾಂಗ್ !

518022-twinklekhanna-110916

“ ಭಾರತದಲ್ಲಿ ವಿದ್ಯಾರ್ಥಿಗಳಿಗಿಂತ ದನಗಳಿಗೇ ಹೆಚ್ಚಿನ ರಕ್ಷಣೆ ಸಿಗುತ್ತಿದೆ” ಇದು ಬಾಲಿವುಡ್‍ನ ಮಾಜಿ ನಟಿ ಟ್ವಿಂಕಲ್ ಖನ್ನಾ ದೆಹಲಿಯ ಪ್ರತಿಷ್ಠಿತ ಜೆಎನ್‍ಯು ಕ್ಯಾಂಪಸ್‍ನಲ್ಲಿ ನಿನ್ನೆ ನಡೆದ ಭೀಕರ ಹಲ್ಲೆಯ ಬಗ್ಗೆ ನೀಡಿರುವ ಪ್ರತಿಕ್ರಿಯೆ. ಜೆಎನ್‍ಯು ಕ್ಯಾಂಪಸ್‍ನಲ್ಲಿ ನಿನ್ನೆ 50 ಕ್ಕೂ ಹೆಚ್ಚಿನ ಮಾಸ್ಕ್‍ಧಾರಿಗಳು ಮಾರಕಾಸ್ತ್ರಗಳಿಂದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ರು. ಇದು ದೇಶದೆಲ್ಲೆಡೆ ಭಾರೀ ಚರ್ಚೆಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಘಟನೆಯನ್ನು ಖಂಡಿಸಲಾಗುತ್ತಿದೆ.

ಹಲ್ಲೆಯನ್ನು ಮಾರ್ಮಿಕವಾಗಿ ಖಂಡಿಸಿರುವ ಅಕ್ಷಯ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ “ ಭಾರತ ದೇಶದಲ್ಲಿ ವಿದ್ಯಾರ್ಥಿಗಳಿಗಿಂತ ಹೆಚ್ಚಿನ  ರಕ್ಷಣೆಯನ್ನು ಹಸುಗಳು ಪಡೆಯುತ್ತಿವೆ’’ ಅಂದಿದ್ದಾರೆ.

ಭಾನುವಾರ ಸಂಜೆ  ದಿಢೀರನೇ ಜೆಎನ್‍ಯುಗೆ ಎಂಟ್ರಿಕೊಟ್ಟ ಹಲ್ಲೆಕೋರರು ಮಾಸ್ಕ್ ಧರಿಸಿ ಜೆಎನ್‍ಯು ಸಂಘಟನೆ ವಿದ್ಯಾರ್ಥಿಗಳಿಗೆ ಇರಿದಿದ್ದು  ಹಲವರು ಗಾಯಗೊಂಡಿದ್ದಾರೆ.ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ . ಇತ್ತ ಪೊಲೀಸರು ಕ್ಯಾಂಪಸ್‍ನಲ್ಲಿ ಬಿಗಿ ಭದ್ರತೆಯನ್ನು  ಕಲ್ಪಿಸಿದ್ದಾರೆ .

Latest News

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.