ಕೊರೋನಾ ಸೋಂಕಿನ ವೇಳೆ ಕಷ್ಟದ ಪರಿಸ್ಥಿಗೆ ಸಿಲುಕಿರುವ ಡಿಗ್ರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಮಾನವೀಯ ದೃಷ್ಠಿಯಿಂದ ಮೂರು ತಿಂಗಳ ಸಂಬಳ ನೀಡಬೇಕೆಂದು ಮಾಜಿ ಸಿ ಎಂ ಕುಮಾರಸ್ವಾಮಿ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಆರ್ಥಿಕ ಹಾಗು ಮಾನಸಿಕವಾಗಿ ಕುಗ್ಗಿ ಹೋಗಿರುವ ಅತಿಥಿ ಉಪನ್ಯಾಸಕರಿಗೆ ತುರ್ತು ಸಹಾಯ ಮಾಡಲು ಎಚ್ ಡಿ ಕೆ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದು ಕೊರೋನಾ ಸಂದರ್ಭದಲ್ಲಿ ಉಪನ್ಯಾಸಕರ ಮೇಲೆ ಮಾನವೀಯತೆ ತೋರಿಸಬೇಕೆಂದು ಹೇಳಿದ್ದಾರೆ.
ಕಷ್ಟದಲ್ಲಿದ್ದ ಅತಿಥಿ ಉಪನ್ಯಾಸಕರು ಖಿನ್ನತೆಗೊಳಗಾಗಿ ಸುಮಾರು 8 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಬಹಳ ಬೇಸರದ ಸಂಗತಿ. ಇದು ಬಹಳ ದುರಾದೃಷ್ಟಕರದ ಸಂಗತಿ. ಈ ಕುರಿತಂತೆ ಸರ್ಕಾರ ತಕ್ಷಣವೇ ಅತಿಥಿ ಉಪನ್ಯಾಸಕಾರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಿಎಂ ,ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.