ಮೊನ್ನೆ ಮೊನ್ನೆಯಷ್ಟೇ ಅಭಿನಯ ಚಕ್ರವರ್ತಿಯ ಹೆಸರಿನಲ್ಲಿ ಅವರ ಅಭಿಮಾನಿಯೊಬ್ಬ ಲೈಬ್ರರಿ ನಿರ್ಮಾಣಮಾಡಿರುವ ಸುದ್ದಿ ಎಲ್ಲೆಡೆ ಸದ್ದುಮಾಡಿತ್ತು..ಇದೀಗ ಮತ್ತೊಬ್ಬ ನಟನ ಅಭಿಮಾನಿಯೊಬ್ಬ ತಾನೇನು ಕಮ್ಮಿ ಇಲ್ಲ ಎಂಬಂತೆ ನೆಚ್ಚಿನ ನಟನ ಬಗ್ಗೆ ತನ್ನ ಅಭಿಮಾನವನ್ನು ಮೆರೆದಿದ್ದಾನೆ. ಯಸ್..ಟಗರು ಚಿತ್ರದ ಮೂಲಕ ಡಾಲಿ ಧನಂಜಯ್ ಎಂಬ ಹೆಸರನ್ನು ಗಳಿಸಿಕೊಂಡಿರುವ ನಟ ಧನಂಜಯ್ ಗೆ ಅಭಿಮಾನಿಯೊಬ್ಬ ಅಚ್ಚರಿಹುಟ್ಟಿಸಿದ್ದಾನೆ. ಡಾಲಿ ಪಾತ್ರವನ್ನು ಅತಿಯಾಗಿ ಹಚ್ಚಿಕೊಂಡಿರುವ ಅಭಿಮಾನಿ ಡಾಲಿ ಲಿಕ್ಕರ್ ಎಂಬ ಹೆಸರಿನಲ್ಲಿ ಬಾರ್ ಓಪನ್ ಮಾಡಿದ್ದಾನೆ.
ಈ ಫೋಟೋವನ್ನು ಧನಂಜಯ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ”ನಾನು ‘Daali pictures’ ಮಾಡ್ಕಂಡಿದ್ರೆ, ಅಭಿಮಾನಿ ದೇವರು ಯಾರೊ ‘Daali liquors’ ಮಾಡ್ಕಂಡವ್ರೆ. ಒಳ್ಳೇದಾಗಲಿ” ಎಂದು ನಗೆ ಚಟಾಕಿ ಸಿಡಿಸಿದ್ದಾರೆ.