ಈಗಂತೂ ಸಿನಿ ಇಂಡಸ್ಟ್ರಿಯಲ್ಲಿ ಒಂದು ರೀತಿಯ ಟ್ರೆಂಡ್ ಶುರುವಾಗಿದೆ..ಕರೆಂಟ್ ಇಶ್ಯೂಗಳನ್ನು, ಪ್ರಖ್ಯಾತರೋ ಇಲ್ವೇ ಕುಖ್ಯಾತರ ಜೀವನವನ್ನು ಆಧಾರವಾಗಿರಿಸಿಕೊಂಡು ಸಿನಿಮಾ ಮಾಡುವುದು ಸಾಮಾನ್ಯವಾಗಿದೆ.. ಈ ಸಾಲಿಗೆ ಒಂದು ಹೊಸ ಸೇರ್ಪಡೆಯಾಗುತ್ತಿದೆ. ಯಸ್..ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಗ್ಗೆ ಸಿನಿಮಾ ನಿರ್ಮಾಣ ಮಾಡಲು ಕೆಲವು ನಿರ್ಮಾಪಕರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರಂತೆ..
ಅದ್ರಲ್ಲೂ ನಿರ್ದೇಶಕ ನಾಗೇಶ್ ಈಗಾಗಲೇ ಫಿಲಂ ಚೇಂಬರನ್ನು ಸಂಪರ್ಕಿಸಿದ್ದು, ಚಿತ್ರದ ಹೆಸರುಗಳನ್ನು ಸೂಚಿಸಿದ್ದಾರೆನ್ನಲಾಗ್ತಿದೆ. ಕನಕಪುರ ಬಂಡೆ, ಕನಕಪುರ ಕೆಂಪೇಗೌಡ, ಕನಕಪುರ ಬೆಳಗಾವಿ ಎಕ್ಸ್‍ಪ್ರೆಸ್ ಎಂಬ ಹೆಸರುಗಳಲ್ಲಿ ಒಂದನ್ನ ಆಯ್ಕೆ ಮಾಡಲು ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದಾರಂತೆ..ಈ ಹೆಸರುಗಳಿಂದ ಇದು ಡಿಕೆಶಿ ಜೀವನಾಧಾರಿತ ಸಿನಿಮಾ ಎನ್ನೋ ಸಂಶಯ ಎಲ್ಲರನ್ನೂ ಕಾಡಿತ್ತದೆಯಾದರೂ ನಿಜವಾಗ್ಲೂ ಈ ಇದು ಕನಕಪುರ ಬಂಡೆಯಾಧಾರಿತ ಸಿನಿಮಾ ಹೌದೇ ಎಂಬುದು ಮಾತ್ರ ಮುಂಬರುವ ದಿನಗಳಲ್ಲಿ ಕನ್ಫರ್ಮ್ ಆಗಬೇಕಿದೆ.