vijaya times advertisements
Visit Channel

ಡಿಕೆಶಿ ಪದಗ್ರಹಣಕ್ಕೆ ಅಸ್ತು ಅಂದ ರಾಜ್ಯ ಸರ್ಕಾರ

file76obnsu68001asa1v2av-1588273841

 ಕೆಪಿಸಿಸಿ ಅಧ್ಯಕ್ಷ  ಸ್ಥಾನಕ್ಕೆ ಡಿ.ಕೆ ಶಿವಕುಮಾರ್  ಆಯ್ಕೆಯಾಗಿ ದಿನಗಳೇ ಕಳೆದು ಹೋಗಿದೆ. ಕೋರೋನಾ ಕಾರಣದಿಂದಾಗಿ  ಪದಗ್ರಹಣ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತಲಿತ್ತು ಕೋವಿಡ್‌-19 ಮಾರ್ಗಸೂಚಿಯ ಪ್ರಕಾರ ಜೂನ್ 14 ರಂದು ನಡೆಯಬೇಕಾಗಿದ್ದ ಕಾರ್ಯಕ್ರಮಕ್ಕೆ ಅನುಮತಿಯನ್ನೂ  ನಿರಾಕರಣೆ ಮಾಡಲಾಗಿತ್ತು…ಆದ್ರೆ ಇದೀಗ  ರಾಜ್ಯ ಸರ್ಕಾರ  ಪದಗ್ರಹಣಕ್ಕೆ ಅನುಮತಿಯನ್ನು ನೀಡಿದೆ. ಇದೀಗ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದಾರೆ. ಆದರೆ ಕೆಲವೊಂದು ಶರತ್ತುಗಳನ್ನು ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಡಿಕೆಶಿ ಪದಗ್ರಹಣಕ್ಕೆ ಸರ್ಕಾರದ  ಯಾವ ಅಭ್ಯಂತರನೂ ಇಲ್ಲ . ಕೊರೋನಾ ಸೋಂಕು  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಹಿನ್ನಲೆ  ಹೆಚ್ಚಿನ ಜನರನ್ನು ಪದಗ್ರಹಣಕ್ಕೆ ಸೇರಿಸಬಾರದು  ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಹೀಗೆ ಕೆಲ ವಿಷಯಗಳ  ಕುರಿತುಈ ಗಾಗಲೇ ಅವರ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ .

ಡಿ.ಕೆ ಶಿವಕುಮಾರ್ ಪದಗ್ರಹಣಕ್ಕೆ ಎರಡು ಬಾರಿ ಅನುಮತಿಯನ್ನು ಸಕರ್ಕಾರ ನಿರಾಕರಣೆ ಮಾಡಿದ್ದು  ; ಸರ್ಕಾರದ ನಡೆಯನ್ನು  ರಾಜಕೀಯ ದುರುದ್ದೇಶ ಎಂದು ಕಾಂಗ್ರೆಸ್ ಪರಿಗಣಿಸಿ ಆಕ್ರೋಶ ವ್ಯಕ್ತಪಡಿಸಿತ್ತು. ಜೊತೆಗೆ ಕೇಂದ್ರ ಗೃಹ ಸಚಿವ  ಅಮಿತ್ ಶಾ ವಚರ್ಚುವಲ್ ರ್ಯಾಲಿಗೆ  ಅನುಮತಿ ನೀಡೋದಾದ್ರೆ ನಮಗೆ ಯಾಕೆ ಅನುಮತಿ ನೀಡಲ್ಲ ಅನ್ನೋದು ಪ್ರಶ್ನಿಸಿ, ಜೂನ್ 14 ರಂದು ರಾಜ್ಯದ್ಯಂತ ಆನ್‌ಲೈನ್ ಮೂಲಕ ಕಾರ್ಯಕ್ರಮ ನಡೆಸಲು ಡಿಕೆಶಿ ಸಿದ್ದತೆ ಮಾಡಿಕೊಂಡಿದ್ದರು.ಆದ್ರೆ ಕೊನೆ ಗಳಿಗೆಯಲ್ಲಿ ಅನುಮತಿಯನ್ನು ನಿರಾಕರಿಸಿತ್ತು.. ಮತ್ತೆ ಇದೀಗ ಕೆಲ ಷರತ್ತುಗಳನ್ನು ವಿಧಿಸೋದರ ಮೂಲಕ  ಪದಗ್ರಹಣಕ್ಕೆ ಅವಕಾಶ ನೀಡಲಾಗಿದೆ

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.