ಬೆಂಗಳೂರು,ಸೆ.4: ಮಹಾಲಕ್ಷ್ಮೀಲೇಔಟ್,ರಾಜಾಜಿನಗರ ಮತ್ತು ಮಲ್ಲೇಶ್ವರಂ ವಿಧಾನಸಭಾ ಕಾಂಗ್ರೆಸ್ ಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ,ಗೃಹ ಸಚಿವರಾದ ಅಮಿತ್ ಷಾರವರು ಸಿ.ಬಿ.ಐ.ಮತ್ತು ಜಾರಿ ನಿರ್ದೇಶನಾಲಯ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರು ಮೇಲೆ ಸುಳ್ಳು ಕೇಸುಗಳನ್ನು ಹಾಕಿದ್ದಾರೆ. ಮಾಜಿ ಸಚಿವರು ಡಿ.ಕೆ.ಶಿವಕುಮಾರ್ ರವರು ಜಾರಿ ನಿರ್ದೇಶನಾಲಯ ತನಿಖೆಗೆ ಸಂಪೂರ್ಣ ಸಹಕಾರ ನೀಡಿದರು. ಆದರೂ ವಿನಾಕಾರಣ ಬಂಧನ ಮಾಡಿರುವುದನ್ನು ಖಂಡಿಸಿ ನವರಂಗ್ ವೃತ್ತದ ಬಳಿ ಪ್ರತಿಭಟನೆ ಮತ್ತು ರಸ್ತೆ ತಡೆ ಮಾಡಿದರು.
ಮಾಜಿ ಆಡಳಿತ ಪಕ್ಷದ ನಾಯಕರು,ಶಂಕರಮಠ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಎಮ್.ಶಿವರಾಜು, ಮಹಾಲಕ್ಷ್ಮೀಪುರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಕೇಶವಮೂರ್ತಿ ,ರಾಜಾಜಿನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಜಿ.ಕೃಷ್ಣಮೂರ್ತಿ ,ಸುಬ್ರಮಣ್ಯನಗರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಹೆಚ್.ಮಂಜುನಾಥ್ ರವರು ಕಾಂಗ್ರೆಸ್ ಮುಖಂಡರು ,ಜೆ.ಡಿ.ಎಸ್.ಪಕ್ಷದ ಕಾರ್ಯಕರ್ತರು ಸಹ ಭಾಗವಹಿಸಿದ್ದರು.