ಸ್ಟಾರ್ ನಟರು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪೋಸ್ಟ್ ಗಳಿಂದ ಸುದ್ದಿಯಾಗೋದು ತೀರಾ ಅಪರೂಪ…ಆದರೆ ಸದ್ಯ ಡಿ ಬಾಸ್ ಇಂತಹ ಒಂದು ಸುದ್ದಿಗೆ ಕಾರಣರಾಗಿದ್ದಾರೆ.. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಈಗ ಭಾರೀ ಚರ್ಚೆಗೆ ಗುರಿಯಾಗಿದೆ. ಟ್ವಿಟ್ಟರ್ ನಲ್ಲಿ ದರ್ಶನ್ ಪೋಸ್ಟ್ ಒಂದನ್ನು ಶೇರ್ ಮಾಡಿ ಯಾರಿಗೋ ಟಾಂಗ್ ನೀಡಿದ್ದಾರೆ ಅನ್ನೋದು ಪಕ್ಕಾ.. ಆದರೆ ಆರಿಗೆ ಅನ್ನೋದು ಮಾತ್ರ ನಿಗೂಢವಾಗಿದೆ.
“ನಾನು ಕ್ಯಾಂಡಿಯಷ್ಟು ಸಿಹಿ, ನೀರಿನಷ್ಟು ತಂಪು, ಕೆಟ್ಟತನದಲ್ಲಿ ನರಕ ತೋರಿಸುತ್ತೇನೆ. ಪ್ರಾಮಾಣೀಕತೆಯಲ್ಲಿ ಯೋಧನಷ್ಟೇ ನಿಷ್ಠ. ಎದುರಿಗಿದ್ದವರು ಹೇಗಿರುತಾರೋ, ನಾನೂ ಹಾಗೆಯೇ ಇರುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿದ ದರ್ಶನ್ ಅಭಿಮಾನಿಗಳು ಇದು ಯಾವ ನಟನಿಗೆ ಹೇಳಿದ್ದಿರಬಹುದಪ್ಪಾ ಅಂತ ಚಿಂತಿಸ್ತಿದ್ದಾರೆ.