ಬೆಂಗಳೂರು ಡಿ 17 : ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಕಂಟಕವಾಗಿದ್ದ ಡ್ರಗ್ಸ್ ಪ್ರಕರಣ ಇದೀಗ ಡೊಡ್ಡ ಸಂಸ್ಥೆಯನ್ನುಕೂಡ ಆವರಿಸಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ ಆರೋಪದಡಿ ಪ್ರೆಸ್ಟೀಜ್ ಗ್ರೂಪ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕಿ ಅಂಜುಂ ರಜಾಕ್ ಅವರನ್ನು ಶುಕ್ರವಾರ ಹಚ್ಚಿನ ವಿಚಾರಣೆಗಾಗಿ ಹಾಜರಾಗುವಂತೆ ಗೋವಿಂದಪುರ ಪೊಲೀಸರು ಸೂಚಿಸಿದ್ದಾರೆ.
ವಾಟ್ಸಾಪ್ ಮೆಸೇಜ್ ಮೂಲಕ ಅಂಜುಂ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ವಕೀಲರೊಂದಿಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದ ಅಂಜುಂ ಅರ್ಧ ಗಂಟೆ ಪೊಲೀಸರ ಪ್ರಶ್ನೆಗೆ ಉತ್ತರಿಸಿದರು. ನನಗೆ ಯಾವುದೇ ಡ್ರಗ್ ಪೆಡ್ಲರ್ ಜೊತೆ ಸಂಪರ್ಕವಿಲ್ಲ. ಬಂಧಿತನಾಗಿರುವ ಆರೋಪಿ ಥಾಮಸ್ ಗೆ ತನ್ನ ಕಾರು ಚಾಲಕನೊಂದಿಗೆ ಸಂಪರ್ಕವಿರಬಹುದು ಎಂದು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.