ಬೆಂಗಳೂರು: ಡ್ರಗ್ಸ್ ವಿಚಾರದಲ್ಲಿ ಇತ್ತೀಚೆಗೆ ಖ್ಯಾತ ನಿರೂಪಕಿಯನ್ನು ವಿಚಾರಣೆಗೆ ಕರೆದ ಹಿನ್ನಲೆಯಲ್ಲಿ ದಿನಕ್ಕೊಂದು ಕಪೋಲ ಕಲ್ಪಿತ ವರದಿಗಳು ಬರುತ್ತಿರುವ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಗಳು ಯಾರು? ಸತ್ಯ ಹೊರ ಬರಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಬ್ರಹತ್ ಮತ್ತು ಮಧ್ಯಮ ಕೈಗಾರಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಬೇಟಿಯಾಗಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಆಂಕರ್ ಒಬ್ಬರ ವಿಚಾರದಲ್ಲಿ ಇಂತಹ ಸುದ್ದಿಗಳು ವರದಿಯಾಗುತ್ತಿದ್ದು, ಇದರಲ್ಲಿ ಕೆಲವು ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ ಎಂಬ ವರದಿಗಳು ಬರುತ್ತಿವೆ. ಈ ಬಗ್ಗೆ ತನಿಖೆಗೆ ಒತ್ತಾಯ ಮಾಡುತ್ತೇನೆ ಎಂದರು.
ಆ ಮಾಜಿ ಮುಖ್ಯಮಂತ್ರಿ ಯಾರು? ಸತ್ಯ ಹೊರ ತರಬೇಕು. ನಾನು, ಎಸ್ ಎಮ್ ಕೃಷ್ಣ, ಜಗದೀಶ್ ಶೇಟ್ಟರ್, ಸಿದ್ಧರಾಮಯ್ಯ ಸೇರಿ 6 ಮುಖ್ಯಮಂತ್ರಿಗಳಿದ್ದೇವೆ. ಆ ಮಾಜಿ ಸಿ ಎಮ್ ಯಾರು ಎಂದು ಹೇಳಲೇ ಬೇಕು ಯಾರೋ ಒಬ್ಬರ ತೇಜೋವಧೆ ಮಾಡಲು ಹೊರಟಿವೆ ಮಾಧ್ಯಮಗಳು. ಜನರನ್ನು ದಿಕ್ಕು ತಪ್ಪಿಸುತ್ತಿವೆ. ಮಂಗಳೂರು ವರದಿಗಾರನಿಗೆ ಈ ಮಾಹಿತಿ ಕೊಟ್ಟವರು ಯಾರು? ಎಂದು ಗೊತ್ತಾಗಿದೆ. ಒಂದಾ ಅವನನ್ನು ಬಂಧಿಸಬೇಕು ಇಲ್ಲವೇ ಮಾಧ್ಯಮಗಳು ಜವಾಬ್ದಾರಿಯಿಂದ ಇರಬೇಕು. ಯಾರು ಎಂಬುದನ್ನು ದೈರ್ಯವಾಗಿ ಹೇಳಬೇಕು. ಎಂದು ಹರಿಹಾಯ್ದರು.