vijaya times advertisements
Visit Channel

ಡ್ರಗ್ ಮಾಫಿಯಾ: ನಟಿ ಸಂಜನಾ ಗಲ್ರಾಣಿ ಮನೆ ಮೇಲೆ ದಾಳಿ

108135039_4076819135726222_2181688111533655844_o


ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್‌ ಘಾಟು ಹೆಚ್ಚಾಗುತ್ತಿದ್ದು ಮಂಗಳವಾರ ಮುಂಜಾನೆ ನಟಿ ಸಂಜನಾ
ಗಲ್ರಾಣಿಯವರ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಿಡೀರ್ ದಾಳಿ ನಡೆಸಿದ್ದಾರೆ.

ಈಕೆಯ ಗೆಳೆಯನಾದ ರಾಹುಲ್ ಅವರನ್ನು ಡ್ರಗ್ಸ್ ಮಾಪಿಯಾ ಆರೋಪಿಯಾಗಿ ಸಿಸಿಬಿ ಈಗಾಗಲೇ ಬಂಧಿಸಿ ವಿಚಾರಣೆ
ನಡೆಸುತ್ತಿದ್ದು, ಈ ವೇಳೆ ರಾಹುಲ್‌ ನಟಿ ಸಂಜನಾ ಜತೆ ಸಂಪರ್ಕ ಹೊಂದಿರುವ ಬಗ್ಗೆ ಬಾಯಿಬಿಟ್ಟಿದ್ದ. ಈ ಮಾಹಿತಿಯ ಆಧಾರದ ಮೇಲೆ ಸಂಜಾನಾರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಸಂಜನಾ ಅಲ್ಲಾ ಅರ್ಚನಾ !
ಈ ಎಲ್ಲಾ ಡ್ರಾಮಗಳ ನಡುವೆ ವಿಜಯವಾಣಿ ಮತ್ತೊಂದು ವರದಿ ನೀಡಿದ್ದು ಸ್ಯಾಂಡಲ್‌ವುಡ್‌ನಲ್ಲಿ ಫೇಮಸ್‌ ಆಗಿರುವ ಸಂಜನಾ ಅವರ ಮೂಲ ಹೆಸರು ಅರ್ಚನಾ ಎಂದು ಬಹಿರಂಗ ಪಡಿಸಿದೆ. ಕೆ.ಆರ್​.ಪುರ ಆರ್​ಟಿಒನಲ್ಲಿ ನೋಂದಣಿ ಆಗಿರುವ ಬಿಎಂಡಬ್ಲ್ಯು ಕಾರು ಅರ್ಚನಾ ಗಲ್ರಾನಿ ಹೆಸರಿನಲ್ಲಿದೆ.

ಅಂಜುಮಾಲಾ ನೇತೃತ್ವದ ಒಟ್ಟು ಎಂಟು ಮಂದಿ ಸಿಸಿಬಿ ಅಧಿಕಾರಿಗಳ ತಂಡ ಇಂದಿರಾ ನಗರದಲ್ಲಿರುವ 100
ಫೀಟ್‌ ರಸ್ತೆಯಲ್ಲಿರುವ ಸಂಜನಾ ಮನೆ ದಾಳಿ ನಡೆಸಿದೆಇನ್ನು ದಾಳಿಯಲ್ಲಿ ಸಂಜಾನಾರ ಸಿಮ್‌ ಕಾರ್ಡ್‌, ದೂರವಾಣಿ ಕರೆ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೂ ಸಿಸಿಬಿ ನಿಗಾ ಇಟ್ಟಿದ್ದು ಸಂಪೂರ್ಣ ಪರಿಶೀಲನೆ ನಡೆಸಿದರು.

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.