ತಾಯಿ – ಮಗಳು ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಮೈಸೂರು ಜಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪ ಕಪಿಲಾ ನದಿಯ ಸಂಗಮದ ಬಳಿ ಮಂಜುಳಾ (38), ಮಗಳು ಸೌಮ್ಯಾ (19) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ನದಿಗೆ ಹಾರುವ ಮುನ್ನ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಇವರು ಮೈಸೂರು ತಾಲೂಕಿನ ಬಂಡಿಪಾಳ್ಯ ಗ್ರಾಮದ ನಿವಾಸಿಗಳು. ದೇವಸ್ಥಾನಕ್ಕೆ ಹೋಗುವುದಾಗಿ ಇವರು ಮನೆಯಿಂದ ತೆರಳಿದ್ದರು ಎಂದು ತಿಳಿದು ಬಂದಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.