ತುಂಬೆ ಗಿಡದಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು, ಪ್ರಾಚೀನ ಕಾಲದಿಂದಲೂ ತುಂಬೆ ಗಿಡಕ್ಕೆ ಬಹಳ ಮಹತ್ವವಿದೆ. ಔಷಧಿಗಷ್ಟೇ ಅಲ್ಲದೆ ಇದರ ಹೂವು ಈಶ್ವರನಿಗೂ ಬಹಳ ಪ್ರಿಯ. ಶಿವಲಿಂಗಕ್ಕೆ ಈ ಹೂವುಗಳನ್ನು ಅರ್ಪಿಸುವುದರಿಂದ ಶಿವ ಸಂತುಷ್ಟನಾಗುತ್ತಾನೆಂಬ ಪ್ರತೀತಿಯಿದೆ.
ತುಂಬೆ ಗಡವು ಬೇರಿನಿಂದ ಹಿಡಿದು ಹೂವಿನವರೆಗೂ ಪ್ರತಿಯೊಂದು ಭಾಗವೂ ಔಷದೀಯ ಗುಣವನ್ನು ಹೊಂದಿದ್ದು, ಶೀತ ಜ್ವರ ಕೆಮ್ಮು ಕಾಡುತಿದ್ದರೆ ಇದರ ಎಲೆಗಳನ್ನು ಜಜ್ಜಿ ರಸ ತೆಗೆದು ಜೇನು ತುಪ್ಪ ಬೆರೆಸಿ ಕುಡಿದರೆ ಶೀತ ಗುಣವಾಗುತ್ತದೆ. ತುಂಬೆ ರಸಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ ಕಷಾಯವನ್ನು ಕುಡಿಯುವುದರಿಂದ ಉತ್ತಮ ಉಪಯೋಗವನ್ನು ಪಡೆಯಬಹುದು, ಕೆಮ್ಮು ತುಂಬಾ ಕಾಡುತಿದ್ದರೆ, ಈ ಗಿಡದ ಎಲೆಗಳನ್ನು ಕಾಲು ಚಮಚ ಎಲೆ ಅಡಿಕೆ ತಿನ್ನುವಾಗ ಬಳಸುವ ಸುಣ್ಣವನ್ನು ಬೆರೆಸಿ ಗಂಟಲಿಗೆ ಹಚ್ಚಿಕೊಂಡರೆ ಕೆಮ್ಮು ಕಡಿಮೆಯಾಗುವುದು.
ಮಕ್ಕಳಿಗೆ ಹುಳ ಬಾಧೆ ಕಾಡುತಿದ್ದರೆ ತುಂಬೆ ಎಲೆಯ ಹಾಗೂ ಇದರ ಹೂವಿನ ರಸವನ್ನು ಕುಡಿಸಿದರೆ ಮಕ್ಕಳ ಹೊಟ್ಟೆಯ ಹುಳ ಬಾಧೆ ಕಡಿಮೆಯಾಗುತ್ತದೆ. ತುಂಬೆ ಗಿಡವನ್ನು ಒಣಗಿಸಿ ಚೂರ್ಣವಾಗಿಯೂ ಬಿಸಿನೀರಿನೊಂದಿಗೆ ಸೇವಿಸಿದರೆ ಜೀರ್ಣಶಕ್ತಿಯು ಉತ್ತಮವಾಗುವುದು. ಈ ಪುಡಿಯಿಂದ ಕಷಾಯವನ್ನು ಮಾಡಿ ಗಾಯವನ್ನು ತೊಳೆದರೆ ಗಾಯ ತಕ್ಷಣ ವಾಸಿಯಾಗುವುದು. ಅಷ್ಟೇ ಅಲ್ಲದೆ ತೀವ್ರವಾದ ದಾಹವಾಗುತಿದ್ದರೆ ಇದರ ಎಲೆಯನ್ನು ಹಾಗೂ ಹೂವನ್ನು ಕಷಾಯ ಮಾಡಿ ಕುಡಿದರೆ ದಾಹ ನಿವಾರಣೆಯಾಗುವುದು.