ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ತೆಲಂಗಾಣ ಸರ್ಕಾರ ಮಹತ್ವದ ಆದೇಶ ನೀಡಿದೆ.
ತೆಲಂಗಾಣದ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಶಾಸಕರ ವೇತನ ಹಾಗೂ ಪಿಂಚಣಿ ಮೊತ್ತದಲ್ಲಿ ಭಾರಿ ಕಡಿತ ಮಾಡುವುದಾಗಿ ತೆಲಂಗಾಣದ ಸಿಎಂ ಕೆ. ಚಂದ್ರಶೇಖರ್ ರಾವ್ ಸರ್ಕಾರ ಘೋಷಿಸಿದೆ. ಕೊರೊನಾದಿಂದ ಸರ್ಕಾರದ ಬೊಕ್ಕಸಕ್ಕೆ ೨ ಸಾವಿರ ಕೋಟಿ ರೂ. ಖೋತಾ ಆಗಿದೆ. ಹೀಗಾಗಿ ನೌಕರರ ವೇತನ ಕತ್ತರಿಗೆ ನಿರ್ಧರಿಸಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಸಿಎಂ, ಸಚಿವರು, ಶಾಸಕರು, ಜನಪ್ರತಿನಿಧಿಗಳ ಶೇ. ೭೫ ರಷ್ಟು ವೇತನ, ಐಎಎಸ್ ಅಧಿಕಾರಿಗಳ ಶೇ. ೬೦ ಇತರೆ ನೌಕರರ ಶೇ. ೫೦ ಹಾಗೂ ಡಿ ದರ್ಜೆ ಹಾಗೂ ಗುತ್ತಿಗೆ ನೌಕರರ ಶೇ. ೧೦ ರಷ್ಟು ವೇತನ ಕಡಿತಗೊಳಿಸುವುದಾಗಿ ಹೇಳಿದೆ.