ಇದು ನಮ್ಮ ರಾಜಧಾದನಿಯಲ್ಲಿ ನಡೀತಿರೋ ಟೋಯಿಂಗ್ ದಂಧೆಯ ಕರಾಳ ಮುಖ. ಸಂಚಾರಿ ನಿಯಮ ಪಾಲನೆಯ ಹೆಸರಲ್ಲಿ ನಮ್ಮ ಟ್ರಾಫಿಕ್ ಪೊಲೀಸರು ಏಜೆಂಟರನ್ನು ಇಟ್ಟುಕೊಂಡು ಲೂಟಿ ಮಾಡ್ತಿದ್ದಾರೆ ಅನ್ನುವ ದೂರನ್ನು ಸಾರ್ವಜನಿಕರು ಕವರ್‌ಸ್ಟೋರಿ ತಂಡಕ್ಕೆ ನಿರಂತರವಾಗಿ ನೀಡುತ್ತಿದ್ದರು. ಜನರ ದೂರಿನ ಸತ್ಯಾಸತ್ಯತೆ ಅರಿಯಲು ವಿಜಯಟೈಮ್ಸ್ ಕವರ್‌ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆಗೆ ಇಳಿದೇ ಬಿಡ್ತು. ನಮ್ಮ ರಹಸ್ಯ ಕಾರ್ಯಾಚರಣೆಯನ್ನು ನಾವು ನಮಗೆ ಅತೀ ಹೆಚ್ಚು ದೂರು ಬಂದ ಜಯನಗರ ಸಂಚಾರಿ ಪೊಲೀಸ್ ಠಾಣೆಯಿಂದ ಪ್ರಾರಂಭಿಸಿದ್ವಿ.
ಜಯನಗರದಲ್ಲಿ ನಾವು ಸ್ಟಿಂಗ್ ಆಪರೇಷನ್ ಮಾಡಿದಾಗ ನಾವು ಕಂಡುಕೊಂಡ ಸತ್ಯ ಏನು ಗೊತ್ತಾ? ಯಸ್ ಇದು ಅಕ್ಷರಶ: ಸತ್ಯ. ಇಲ್ಲಿ ನಾವು ರಹಸ್ಯ ಕಾರ್ಯಾಚರಣೆ ಮಾಡಿದಾಗ ಈ ಕರಾಳಸತ್ಯ ಬಯಲಾಯ್ತು. ಯಸ್ ಈ ವಿಡಿಯೋ ಇಲ್ಲಿ ನಡೆಯುವ ಅಕ್ರಮಕ್ಕೆ ಸ್ಪಷ್ಟ ಸಾಕ್ಷಿ. ಇನ್ನು ಈತನ ಮಾತನ್ನೊಮ್ಮೆ ಕೇಳಿ. ಹೌದು ಈತ ರಾಜು ಅಂತ. ಈತನೇ ವಾಹನ ಸವಾರರಿಂದ ಹಣ ಸಂಗ್ರಹಿಸೋ ಏಜೆಂಟ್. ಈತನೇ ಪೊಲೀಸರು ಹಾಗೂ ಜನರ ನಡುವಿನ ಕೊಂಡಿ. ಈತನ ಮೂಲಕ ಹೋದ್ರೆ ೧೦೦೦ ರೂಪಾಯಿ ಇಲ್ಲದಿದ್ರೆ ಫುಲ್ ೧೬೫೦ ದ್ವಿಚಕ್ರ ವಾಹನಕ್ಕೆ, ೨೦೦೦ ರೂ. ಕಾರಿಗೆ ಕಟ್ಟಲೇ ಬೇಕು. ಜನ ಎಷ್ಟು ಗೋಗರೆದ್ರು ಪೊಲೀಸರು ಬಿಡೋದೇ ಇಲ್ಲ ಅಂತಾರೆ. ಕನಿಕರ ಇಲ್ಲದಂತೆ ವರ್ತಿಸೋ ಸಂಚಾರಿ ಪೊಲೀಸರ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚುತ್ತಿದೆ. ನಮ್ಮ ತಂಡ ರಹಸ್ಯ ಕಾರ್ಯಾಚರಣೆಯನ್ನು ಮುಂದುವರೆಸಿತು. ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಬಳಿಯ ಟೋಯಿಂಗ್ ಅಡ್ಡಕ್ಕೆ ಕಾಲಿಟ್ಟಾಗ ಅಲ್ಲಿ ಕಂಡು ಬಂದ ದೃಶ್ಯವನ್ನೊಮ್ಮೆ ನೋಡಿ. ಟ್ರಾಫಿಕ್ ಪೊಲೀಸರು ಏಜೆಂಟರನ್ನು ನೇಮಿಸಿ ಕಪ್ಪು ಹಣ ಸಂಗ್ರಹಿಸುತ್ತಿದ್ದಾರೆ. ಇಂದಿರಾನಗರದಲ್ಲಂತು ಈ ದಂಧೆ ರಾಜಾರೋಷವಾಗಿಯೇ ನಡೆಯುತ್ತಿರುವುದು ನಮ್ಮ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಯ್ತು. ಇನ್ನು ಮಲ್ಲೇಶ್ವರಂನಲ್ಲಿ ನಡೀತಿರೋ ಟೋಯಿಂಗ್ ದಂಧೆ ನಡು ರಸ್ತೆಯಲ್ಲೇ ನಡೆಯುತ್ತೆ. ರಸ್ತೆ ಬದಿ ನಿಲ್ಲಿಸಿರೋ ಗಾಡಿಯನ್ನು ಎತ್ತು ತಂದು ನಡುರಸ್ತೆಯಲ್ಲಿ ಇಟ್ಟುಕೊಂಡು ಫೈನ್ ಕಲೆಕ್ಟ್ ಮಾಡ್ತಿದ್ದಾರೆ. ಹಾಗಾಗಿ ಇಲ್ಲಿ ನಿತ್ಯ ಜಗಳಗಳು ನಡೆಯುತ್ತಲೇ ಇರುತ್ತೆ.
ಇನ್ನು ಚಿಕ್ಕಪೇಟೆ ಕತೆ ಕೇಳಲೇ ಬೇಡಿ. ಇಲ್ಲಿ ಟೋಯಿಂಗ್ ದಂಧೆ ದರೋಡೆಕೋರರರಿಗಿಂತಲೂ ಕಡೆಯಾಗಿ ನಡೆ¸ಯುತ್ತಿದೆ. ಇಲ್ಲಿ ರಶೀದಿ ಹರಿಯೋದೇ ಅಪರೂಪ. ಈ ರೀತಿ ಇಡೀ ಬೆಂಗಳೂರಲ್ಲಿ ಟೋಯಿಂಗ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ಬಗ್ಗೆ ನೇರವಾಗಿ ಸಂಚಾರಿ ಪೊಲೀಸರಿಂದಲೇ ವಿಚಾರಿಸೋಣ ಅಂತ ನಾವು ನಾನಾ ಟೋಯಿಂಗ್ ಅಡ್ಡಕ್ಕೆ ಭೇಟಿ ಕೊಟ್ವಿ. ಆಗ ಕಂಡು ಬಂದ ಒಂದೊಂದು ದೃಶ್ಯಗಳನ್ನ ತೋರಿಸ್ತೀನಿ ಬನ್ನಿ. ಟೋಯಿಂಗ್ ದಂಧೆಯಿಂದ ಸರ್ಕಾರಕ್ಕೆ ಭಾರೀ ನಷ್ಟ, ಜನರಿಗೆ ಟಾರ್ಚರ್ ಆಗ್ತಿದೆ. ಗೃಹ ಸಚಿವರು ಈಗಲಾದ್ರೂ ಎಚ್ಚೆತ್ತುಕೊಂಡು ಈ ದಂಧೆಗೆ ಬ್ರೇಕ್ ಹಾಕಿ ಪಾರದರ್ಶಕ ವ್ಯವಸ್ಥೆ ಬರುವ ಹಾಗೆ ಮಾಡಬೇಕು.