ಬೆಂಗಳೂರು: ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ತೀವ್ರವಾಗಿ ಹರಡುತ್ತಿದೆ. ಇತ್ತೀಚೆಗೆ ಅನೇಕ ಮಂದಿ ಕೆಮ್ಮು ಜ್ವರ ಉಸಿರಾಟ ತೊಂದರೆ ಇದ್ದರೂ ನಿರ್ಲಕ್ಷ್ಯ ಮಾಡಿಕೊಂಡು ನೆಂಟರ ಮನೆ, ಪಾರ್ಕ್, ಮಾಲ್ ಮುಂತಾದೆಡೆ ಸುತ್ತಾಡುತ್ತಾ ಇತರರಿಗೂ ಹಬ್ಬಿಸುವುದು ಕಂಡು ಬರುತ್ತಿದೆ. ಮಾಸ್ಕ್ ಹಾಕದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡೋದೂ ಕಂಡು ಬರುತ್ತಿದೆ. ಇದಕ್ಕಾಗಿಯೇ ರಾಜ್ಯದಲ್ಲಿ ಮಾಸ್ಕ್ ಧರಿಸದೆ ಓಡಾಡುವವರಿಗೆ ದಂಡ ವಿಧಿಸಲಾಗಿದೆ.
ದಯವಿಟ್ಟು ಯಾವುದೇ ಆರೋಗ್ಯ ತೊಂದರೆಗಳು ಕಂಡು ಬಂದರೂ ಬೀದಿಗಿಳಿಯಬೇಡಿ ಸ್ನೇಹಿತರಿಗೆ ಕುಟುಂಬದವರಿಗೆ ಸಾರ್ವಜನಿಕರಿಗೆ ಕಾಯಿಲೆ ಹಬ್ಬಿಸಬೇಡಿ.ಯಾರ ಸಂಪರ್ಕಕ್ಕೆ ಬಾರದೆ ಮನೆಯಲ್ಲಿರಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ . ಮತ್ತೊಬ್ಬರಿಗೆ ತೊಂದರೆ ಕೊಡಬೇಡಿ ಎಂದು ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ