Breaking News
ರೈತ ವಿರೋಧಿ ಕಾನೂನುಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು: ಸಿದ್ದರಾಮಯ್ಯ72ನೇ ಗಣರಾಜ್ಯೋತ್ಸವ – ರಾಜ್​ಪಥ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ಕೋವಿಂದ್ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರೊಟೆಸ್ಟ್: ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಟ್ರ್ಯಾಕ್ಟರ್ ಪೆರೇಡ್2021ನೇ ಸಾಲಿನ “ಪದ್ಮ‌ ಪ್ರಶಸ್ತಿ” ಪ್ರಕಟ: ಕರ್ನಾಟಕದ ಐವರು ಸೇರಿದಂತೆ 119 ಮಂದಿಗೆ ಗೌರವ`ಡೆನ್ವರ್‌’ಗೆ ಈಗ ಸುದೀಪ್ ರಾಯಭಾರಿಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ಗೆ ಅನುಮತಿ ಇಲ್ಲ: ಕಮಲ್ ಪಂತ್ಮತ್ತೆ ಕೆ ಸುಧಾಕರ್ ಗೆ ಆರೋಗ್ಯ ಇಲಾಖೆ ಹೊಣೆಭಾರತದ ಗಡಿಗೆ ನುಸುಳಿದ ಚೀನಾ ಸೈನಿಕರು – ದಾಳಿಗೆ 20 ಸೈನಿಕರು ಗಾಯನನಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಟ್ಟರೆ ನಿಭಾಯಿಸುತ್ತೇನೆ: ಎಂಟಿಬಿ ನಾಗರಾಜ್ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ

ದರ್ಟಿ ಫುಡ್‌ ಸೀಕ್ರೆಟ್‌

Share on facebook
Share on google
Share on twitter
Share on linkedin
Share on print

ವಿಷ ಆಹಾರ ಮಾಫಿಯಾದ ವಿರುದ್ಧ ಕವರ್‌ಸ್ಟೋರಿ ತಂಡ ನಿರಂತರವಾಗಿ ಹೋರಾಟ ಮಾಡುತ್ತಲೇ ಇದೆ. ನಾವು ತಿನ್ನೋ ಅನ್ನಕ್ಕೆ ವಿಷ ಹಾಕುವ ದಂಧೆಕೋರರನ್ನು ವಿಷ ಉಗ್ರರು ಅಂತ ಕರಿಯಬೇಕು. ಈ ಉಗ್ರರು ಜನಸಾಮಾನ್ಯರಿಗೆ ಗೊತ್ತಿಲ್ಲದೆ ಜನರ ಮೇಲೆ ದಾಳಿ ಮಾಡ್ತಾರೆ. ಈ ಉಗ್ರರು ಇಡೀ ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡ್ತಾರೆ. ಜನರಿಗೆ ವಿಷ ತಿನ್ನಸಿ ನಿಧಾನವಾಗಿ ನಾನಾ ರೋಗಗಳಿಗೆ ತುತ್ತು ಮಾಡಿಸಿ ಕೊಲ್ತಾರೆ. ಕಾನೂನನ್ನು ಉಲ್ಲಂಘಿಸಿ ಕಾನೂನಿಗೆ ಸವಾಲೆಸೆಯುತ್ತಿದ್ದಾರೆ. ಹಣ ಗಳಿಸೋ ಉದ್ದೇಶದಿಂದ ಇತರರ ಹೆಣ ಬೀಳಿಸ್ತಾರೆ. ಇಂಥ ಆಹಾರ ಮಾಫಿಯಾಗಳ ವಿರುದ್ಧ ಇದೀಗ ವಿಜಯಟೈಮ್ಸ್ ತಂಡ ಸಮರ ಸಾರಿದೆ. ವಿಷ ಆಹಾರ ಮಾಫಿಯಾಗಳ ಬಣ್ಣ ಬಯಲು ಮಾಡಲು ರೆಡಿಯಾಗಿದೆ.

ಆಹಾರ ಮಾಫಿಯಾದ ಬಣ್ಣ ಬಯಲು ಮಾಡುವುದು ಸುಲಭದ ಮಾತಲ್ಲ. ಈ ದಂಧೆಕೋರರ ವಿರುದ್ಧ ಸಮರ ಸಾರಲು ಜನರ ಸಹಕಾರದ ಅಗತ್ಯವೂ ಇದೆ. ಜನ ತಮ್ಮ ಸುತ್ತಮುತ್ತಲು ನಡೆಯೋ ಇಂಥಾ ವಿಷ ಆಹಾರ ಮಾಫಿಯಾಗಳ ಸದಾ ನಿಗಾ ಇಡಬೇಕು. ಅದ್ರಲ್ಲೂ ಕೊರೋನಾ ದಾಳಿಯ ಬಳಿಕ ಹೊಟೇಲ್, ಡಾಬಾ, ಪೆಟ್ಟಿಗೆ ಅಂಗಡಿಗಳಲ್ಲಿ ಆಹಾರವನ್ನು ಅತ್ಯಂತ ಶುಚಿಯಿಂದ ತಯಾರಿಸಬೇಕು, ಜನರಿಗೆ ಬಡಿಸಬೇಕು. ಸರ್ಕಾರದ ನಿಯಮ ಪಾಲಿಸದ ಆಹಾರ ತಯಾರಕರ ವಿರುದ್ಧ ಹೋರಾಡಬೇಕು. ಈ ವಿಷ ಆಹಾರ ಮಾಫಿಯಾ ದೊಡ್ಡಮಟ್ಟದಲ್ಲಿ ನಡೀತಿದ್ರೆ ನೀವು ನಮ್ಮನ್ನು ಸಂಪರ್ಕಿಸಿ. ನಮ್ಮ ದೂರವಾಣಿ ಸಂಖ್ಯೆ ೮೩೧೭೩೯೮೪೮೬.  ನಾವು ರಹಸ್ಯ ಕಾರ್ಯಾಚರಣೆ ಮಾಡಿ ಅವರ ಉಗ್ರ ರೂಪವನ್ನು ಬಟಾಬಯಲು ಮಾಡ್ತೇವೆ. ಅಲ್ಲದೆ ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗಳು ಕೂಡ ಈ ಬಗ್ಗೆ ಆಸಕ್ತಿ ವಹಿಸಬೇಕು. ಜನರ ಆರೋಗ್ಯ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಸರ್ಕಾರ ಇವರಿಗೆ ವಹಿಸಿರುವ ಕಾರಣ ವಿಷ ಆಹಾರ ಮಾಫಿಯಾದ ವಿರುದ್ಧ ಸಮರ ಸಾರೋದು ಅವರ ಕರ್ತವ್ಯ. ಅಲ್ಲದೆ ಸಾರ್ವಜನಿಕರು ಕೊಡೋ ದೂರನ್ನು ಪರಿಶೀಲಿಸಿ ಅಂಥವರ ವಿರುದ್ಧ ದಾಳಿ ಮಾಡೋದು ಕರ್ತವ್ಯ. ಅಲ್ಲದೆ ಜನರಿಗೆ ಆಹಾರ ಸುರಕ್ಷತಾ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಬೇಕು.

Submit Your Article