Visit Channel

ದಸರಾ ಗಜಪಡೆ ಆನೆಗಳ ತೂಕ ಪರಿಶೀಲಿಸಿದ ವೈದ್ಯಾಧಿಕಾರಿಗಳು: ಯಾವ ಆನೆಯ ತೂಕ ಎಷ್ಟೆಷ್ಟು..?

j7B2xgXu

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ನಿನ್ನೆಯಷ್ಟೆ ಅರಮನೆ ಅಂಗಳಕ್ಕೆ ಆಗಮಿಸಿರುವ ಮೊದಲ ಹಂತದ ದಸರಾ ಗಜಪಡೆಯ ಆನೆಗಳ ತೂಕ ಹಾಕಲಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಆನೆಗಳ ತೂಕದಲ್ಲಿ ಕೊಂಚ ಏರಿಕೆಯಾಗಿದೆ.

ಮೈಸೂರಿಗೆ ಆಗಮಿಸಿ ಅರಮನೆಯಲ್ಲಿ ಬೀಡುಬಿಟ್ಟಿರುವ ಮೊದಲ ಹಂತದ 6 ಆನೆಗಳ ತೂಕವನ್ನ ವೈದ್ಯಧೀಕಾರಿ ನಾಗರಾಜು ನೇತೃತ್ವದಲ್ಲಿ  ಲೆಕ್ಕ ಹಾಕಲಾಯಿತು. ಕಳೆದ ವರ್ಷಕ್ಕಿಂತ ಈ ಬಾರಿ ಆನೆಗಳ ತೂಕದಲ್ಲಿ ಕೊಂಚ ಏರಿಕೆಯಾಗಿದ್ದು ಕ್ಯಾಪ್ಟನ್ ಅರ್ಜುನ ಸಹ ಕಳೆದ ಬಾರಿಗಿಂತ ಈಬಾರಿ  ಕೊಂಚ ಬಲಿಷ್ಟನಾಗಿದ್ದಾನೆ.

ಕಳೆದ ಭಾರಿ 5600 ಕೆ.ಜಿ.ತೂಕ ಇದ್ದ ಕ್ಯಾಪ್ಟನ್ ಅರ್ಜುನ ಈಗ ಬರೋಬ್ಬರಿ  5800 ಕೆ.ಜಿ.ತೂಕವಿದ್ದಾನೆ. ಈಗ 200 ಕೆ.ಜಿ. ಹೆಚ್ಚಿಗೆ ತೂಗಿದ್ದಾನೆ. ಉಳಿದಂತೆ ಅರ್ಜುನನ ಸಂಗಾತಿಗಳಾದ  ವರಲಕ್ಷ್ಮಿ- 3,510 ಕೆಜಿ, ವಿಜಯಾ 2,825 ಕೆಜಿ, ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿರುವ ಈಶ್ವರ- 3,995 ಕೆಜಿ ತೂಗಿದ್ದಾನೆ, ಭವಿಷ್ಯದ ಅಂಬಾರಿ ಹೊರುವ ಆನೆ ಎಂದು ಬಿಂಬಿತವಾದ ಧನಂಜಯ 4,460 ಕೆಜಿ ಇದ್ದಾನೆ. ಕಾರ್ಯಾಚರಣೆಗಳ ರಾಜ ಅಭಿಮನ್ಯು 5,145 ಕೆಜಿ ಇದ್ದು,ಇಂದಿನಿಂದ ದಸರಾ ಆನೆಗಳಿಗೆ ದಸರಾ ವಿಶೇಷ ಆಹಾರ ಸಿಗಲಿದೆ. ಇಂದಿನಿಂದಲೇ ಆನೆಗಳಿಗೆ ತಾಲೀಮು ಶುರುವಾಗಿದೆ.

ಪ್ರಸ್ತುತ ಆನೆಗಳ ತೂಕ.

ವಿಜಯಾ- 2,790

ಅರ್ಜುನ- 5,800

ವರಲಕ್ಷ್ಮಿ- 3,510

ಈಶ್ವರ- 3,995

ಧನಂಜಯ- 4,460

ವಿಜಯಾ- 2,825

ಅಭಿಮನ್ಯು- 5,145

ಕಳೆದ ವರ್ಷದ ಆನೆಗಳ ತೂಕ.

ವರಲಕ್ಷ್ಮಿ- 3,120

ಅರ್ಜುನ- 5,650

ಧನಂಜಯ- 4,045

ಅಭಿಮನ್ಯು- 4,930

ವಿಜಯಾ- 2,790

Latest News

atm
ಮಾಹಿತಿ

ATM ಬಳಕೆದಾರರು ಓದಲೇಬೇಕಾದ ಸುದ್ದಿ ; RBI ನಿಯಮಗಳ ಬಗ್ಗೆ ಸರಳವಾಗಿ ತಿಳಿಯಿರಿ

ಇನ್ನು ನಿಮ್ಮ ಬ್ಯಾಂಕ್ ಹೊರತುಪಡಿಸಿ, ಬೇರೆ ಬ್ಯಾಂಕ್ ನ ಎಟಿಎಂಗಳಲ್ಲಿ ಮೆಟ್ರೋ ಸಿಟಿಗಳಲ್ಲಿ ಮೂರು ಬಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ಟ್ರಾನ್ಸಾಕ್ಷನ್ ಮಾಡಬಹುದು.

BJP
ರಾಜಕೀಯ

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಎನ್ನಲು ಸಿದ್ದರಾಮಯ್ಯ ಯಾರು? : ಬಿಜೆಪಿ

ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ(Congress Party) ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದಿದೆ.

Fruit
ಮಾಹಿತಿ

ಬಿಪಿ, ಮದುಮೇಹ ಸೇರಿದಂತೆ ಅನೇಕ ಖಾಯಿಲೆಗಳಿಗೆ ರಾಮಬಾಣ ನೇರಳೆ ಹಣ್ಣು ; ಓದಿ ಈ ಉಪಯುಕ್ತ ಮಾಹಿತಿ

ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಖಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೂ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ(Ayurveda).