ಹೊಸದಿಲ್ಲಿ, ಅ. 31: ನಟಿ ಕಾಜಲ್ ಅಗರವಾಲ್ ಮತ್ತು ಉದ್ಯಮಿ ಗೌತಮ್ ಕಿಚ್ಲು ಶುಕ್ರವಾರ ಸಂಜೆ ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ಮೂರು ದಿನಗಳಿಂದ ಅರಿಸಿನ ಶಾಸ್ತ್ರ, ಮೆಹೆಂದಿ ಶಾಸ್ತ್ರಗಳು ನಡೆಯಿತು. ಕಾಜಲ್ ಪಿಂಕ್ ಬಣ್ಣದ ಉಡುಗೆ ತೊಟ್ಟು ಉದ್ಯಮಿ ಗೌತಮ್ ಜೊತೆ ಸಪ್ತಪದಿ ತುಳಿದಿದ್ದಾರೆ. ಮದುವೆಗೂ ಮುನ್ನ ತಾವು ಮೇಕಪ್ ಮಾಡಿಕೊಂಡ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಜಲ್ ಅಪ್ಲೋಡ್ ಮಾಡಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಜಲ್ ಹಾಗೂ ಗೌತಮ್ ಅವರನ್ನು ನಟ-ನಟಿಯರು, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.