ಲಾಕ್ ಡೌನ್ ಬಳಿಕ ದೇಶದಲ್ಲಿ ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿತ ಕಂಡಿದ್ದು ; ಇದೀಗ ದೇಶ ಕೊಂಚಮಟ್ಟಿಗೆ ಸುಧಾರಿಸಲು ಹರಸಾಹಸಪಡುತ್ತಿದೆ. ಆದ್ರೆ ಇದೀಗ ಇದರ ನಡುವೆ ಗ್ರಾಹಕರ ಜೇಬಿಗೆ ಕತ್ತರಿ ಬೀಳಲು ಶುರುವಾಗಿದೆ. ಸತತವಾಗಿ ಕಳೆದ ೯ ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ.
ಅಂತಾರಾಷ್ಟ್ರೀಯ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿರುವುದದಿಂದ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕಂಡಿದ್ದು ; ಪೆಟ್ರೋಲ್ ಮೇಲೆ 48 ಪೈಸೆ, ಡೀಸೆಲ್ ಮೇಲೆ 23 ಪ್ರೈಸೆ ಹೆಚ್ಚಳವಾಗಿದೆ. ಈ ಮೂಲಕ ಇಲ್ಲಿಯವರೆಗೆ ಪೆಟ್ರೋಲ್, ಡೀಸೆಲ್ ಮೇಲೆ 4.4 ರೂ.ಏರಿಕೆಯಾಗಿದ್ದು ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದೆ.
ಅಂದಹಾಗೆ ಪ್ರತಿದಿನ ಈ ರೀತಿ ಕಚ್ಚಾತೈಲಬೆಲೆಯಲ್ಲಿ ಏರಿಕೆ ಕಂಡುಬಂದ್ರೆ ಅಗತ್ಯವಸ್ತುಗಳ ಬೆಲೆ ಏರಿಕೆಯೂ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.