• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ದೀಪಾವಳಿ ಹಬ್ಬದ ಸಂಭ್ರಮಕ್ಕೆ ತಟ್ಟಿದ ದರ ಏರಿಕೆಯ ಬಿಸಿ

Sharadhi by Sharadhi
in ಪ್ರಮುಖ ಸುದ್ದಿ, ರಾಜ್ಯ
ದೀಪಾವಳಿ ಹಬ್ಬದ ಸಂಭ್ರಮಕ್ಕೆ ತಟ್ಟಿದ ದರ ಏರಿಕೆಯ ಬಿಸಿ
0
SHARES
0
VIEWS
Share on FacebookShare on Twitter

ಹುಬ್ಬಳ್ಳಿ, ನ. 05: ಕೊರೊನಾದಿಂದ ಬೇಸತ್ತ ಜನರು ಮುಂಬರುವ ದೀಪಾವಳಿಯನ್ನು ಸಂಭ್ರಮಿಸಲು ಕಾತುರರಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಮೇಲಿನ ದರ ಏರಿಕೆಯು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗೆಯೇ ಜನರನ್ನು ಕಂಗಾಲಾಗಿಸಿದೆ. ಅದರಲ್ಲೂ ತರಕಾರಿ, ಬೇಳೆ ಕಾಳುಗಳ ಬೆಲೆ ದುಬಾರಿಯಾಗಿದ್ದು, ದೀಪಾವಳಿ ಹೊಸ್ತಿಲಲ್ಲಿ ಎದುರಾದ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ‌ ಜನರು ಅಕ್ಷರಶಃ ತತ್ತರಿಸುವಂತೆ ಮಾಡಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗುತ್ತದೆ. ಬೆಂಗಳೂರು, ಗೋವಾ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಗೂ ತರಕಾರಿ ಉತ್ತರ ಕರ್ನಾಟಕ ಭಾಗದಿಂದ ಸರಬರಾಜಾಗುತ್ತದೆ. ಈರುಳ್ಳಿ, ಮೆಣಸಿನಕಾಯಿ, ಜೋಳ, ಕಡಲೆ, ಹೆಸರು ದೇಶಾದ್ಯಂತ ರಫ್ತಾಗುತ್ತದೆ. ಆದರೆ ಅತಿವೃಷ್ಟಿಯ ಹೊಡೆತ ಉತ್ತರ ಕರ್ನಾಟಕವನ್ನು ಕಂಗೆಡಿಸಿದೆ.

ಪ್ರವಾಹದಿಂದ ತರಕಾರಿ ಸೇರಿದಂತೆ ಇನ್ನಿತರ ಬೆಳೆ ನೀರು ಪಾಲಾಗಿದೆ. ಪರಿಣಾಮ ತರಕಾರಿ, ಆಹಾರ ಧಾನ್ಯಗಳ ಕೊರತೆ ಸೃಷ್ಟಿಯಾಗಿ, ಬೆಲೆ ಏರಿಕೆಯಾಗಿದೆ. ಇದರ ಪರಿಣಾಮ ಸ್ಥಳೀಯರ ಮೇಲೂ ಆಗುತ್ತಿದೆ. ಅದರಲ್ಲೂ ಹಬ್ಬದ ಊಟಕ್ಕೆ ತರಹೇವಾರಿ ತರಕಾರಿ ಇಲ್ಲದೇ ಊಟ ರುಚಿಸದು. ಹಾಗಂತ ಮಾರುಕಟ್ಟೆಗೆ ತರಕಾರಿ ಕೊಳ್ಳಲು ಹೋದರೆ ನೂರಿನ್ನೂರರ ನೋಟು ಯಾವುದಕ್ಕೂ ಸಾಲದು.

ಈರುಳ್ಳಿ ಬೆಲೆ ಕೆಜಿಗೆ 80ರಿಂದ 100 ರೂಪಾಯಿ ಗಡಿಯಲ್ಲಿಯೇ ಇದೆ. ಆಲೂಗಡ್ಡೆ ಕೆಜಿಗೆ 50 ರಿಂದ 70 ರೂಪಾಯಿ. ಬೆಂಡೆಕಾಯಿ, ಚವಳಿಕಾಯಿ, ಹಾಗಲಕಾಯಿ, ಬದನೆಕಾಯಿ ಕೆಜಿಗೆ 80ರಿಂದ 100 ರೂಪಾಯಿಯಾದರೆ, ಬೀನ್ಸ್, ಬಟಾಣಿ, ಕ್ಯಾರೆಟ್ ಕೆಜಿಗೆ 100 ರೂಪಾಯಿ ಗಡಿ ದಾಟಿವೆ. ಹಸಿ ಶುಂಠಿ 200 ರೂಪಾಯಿಗೆ ಕೆಜಿಯಾಗಿದ್ದರೆ, ಬೆಳ್ಳುಳ್ಳಿ 180ರಿಂದ 200 ರೂಪಾಯಿಯಾಗಿದೆ. ತೆಂಗಿನಕಾಯಿ ಬೆಲೆಯೂ ದಿಢೀರನೆ ಏರಿಕೆ ಕಂಡಿರುವುದರ ಜತೆಗೆ ಬೇಳೆ ಕಾಳುಗಳ ಬೆಲೆಯೂ ಗಗನಕ್ಕೇರಿದೆ. ತೊಗರಿ ಬೇಳೆ 150ರಿಂದ 170ರೂಪಾಯಿ. ಸೂರ್ಯಕಾಂತಿ ಎಣ್ಣೆಯಂತೂ ಒಂದೇ ವಾರದಲ್ಲಿ ಲೀಟರ್‌ಗೆ 25 ರೂಪಾಯಿ ಹೆಚ್ಚಳವಾಗಿದೆ. ಪಾಮ್ ಎಣ್ಣೆ ಬೆಲೆಯೂ 15ರೂಪಾಯಿ ಏರಿಕೆ‌ ಕಂಡಿದೆ.

ಒಟ್ಟಾರೆ ಒಂದೆಡೆ ಕೊರೊನಾ, ಮತ್ತೊಂದಡೆ ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಭಾರೀ ಮಳೆ ಜನರನ್ನು ಹೈರಾಣಾಗಿಸಿದೆ. ಇದರ ಮಧ್ಯೆ ಬೆಲೆ ಏರಿಕೆ ಬಿಸಿ ಜೋರಾಗಿಯೇ ತಟ್ಟಿದೆ‌.

Related News

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !
ರಾಜಕೀಯ

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !

March 20, 2023
ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!
ರಾಜಕೀಯ

ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!

March 20, 2023
ಆಜಾನ್ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ; ಡಿ.ಸಿ ಕಛೇರಿ ಎದುರು ಆಜಾನ್ ಪಠನೆ
ರಾಜಕೀಯ

ಆಜಾನ್ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ; ಡಿ.ಸಿ ಕಛೇರಿ ಎದುರು ಆಜಾನ್ ಪಠನೆ

March 20, 2023
ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ : 2.48 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಿದ ಸಿಸಿಬಿ ಪೊಲೀಸರು.

March 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.