ಕೊರೋನಾದ ಭೀತಿ ಎಲ್ಲೆಡೆ ಹೆಚ್ಚುತ್ತಲೇ ಇದೆ. ಭಾರತದಲ್ಲಿಒಂದೇ ದಿನ 10,667 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. 380ಮಂದಿ ಕೊರೋನದಿಂದ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಎಂದಿನಂತೆ ಹೆಚ್ಚು ಪ್ರಕರಣಗಳು ದಾಖಲಾಗಿ ಈವರೆಗೂ 1,10,744 ಮಂದಿಗೆ ಸೋಂಕು ಅಂಟಿದೆ. ದೆಹಲಿಯಲ್ಲೂ ಕೂಡ ಪರಿಸ್ಥಿತಿ ಗಂಭೀರವಾಗಿದ್ದು 42, 829 ಮಂದಿಗೆ ಕೊರೋನಾ ಸೋಂಕಿದೆ. ಕೇವಲ 24ಗಂಟೆಯಲ್ಲಿ 73 ಮಂದಿ ಬಲಿಯಾಗಿದ್ದಾರೆ.
ಇನ್ನು ರಾಜ್ಯದಲ್ಲಿ ಸೋಮವಾರದಂದು 213 ಹೊಸ ಪ್ರಕರಣಗಳು ದಾಖಲಾಗಿದ್ದು 180 ಮಂದಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ. ಗುಣಮುಖರಾದವರ ಸಂಖ್ಯೆ 4,135 ಏರಿಕೆಯಾಗಿದ್ದು ಇನ್ನು 2987 ಕೇಸ್ ಗಳು ಸಕ್ರಿಯೆ ಯಲ್ಲಿದೆ. ಇಂದು ಪ್ರಧಾನಿಯ ಜೊತೆ ನಡೆಸುವ ಚರ್ಚೆಯಲ್ಲಿ ಲಾಕ್ಡೌನ್ ಸಡಿಲಿಕೆ ಬಗ್ಗೆ ರಾಜ್ಯದ ಸಿಎಂ ಬಿ ಎಸ್ ವೈ ಜೊತೆ ಮನವಿ ಮಾಡಲಿದ್ದಾರೆ.