ನವದೆಹಲಿ: ದೇಶದಲ್ಲಿ ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 96,424 ಮಂದಿಯಲ್ಲಿ ಹೊಸ ಕೇಸ್ ಪತ್ತೆಯಾಗಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 52 ಲಕ್ಷ ದಾಟಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 52,14,678 ಕ್ಕೆ ತಲುಪಿದೆ. ಎಂದು ತಿಳಿದು ಬಂದಿದೆ.
ಇನ್ನು ಒಂದೇ ದಿನದಲ್ಲಿ 1,174 ಮಂದಿ ಸಾವಿಗೀಡಾಗಿದ್ದು ಮಹಾಮಾರಿ ಈವರೆಗೂ 84,372 ಮಂದಿಯನ್ನು ಬಲಿತೆಗೆದುಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಈವರೆಗೆ 52,14,678 ಮಂದಿ ಸೋಂಕಿತರಲ್ಲಿ 41,12,552 ಜನರು ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 10,17,754 ಸಕ್ರೀಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿಸಿದೆ. ಸೆಪ್ಟೆಂಬರ್ ನಲ್ಲಿ 15 ದಿನಗಳ ಅವಧಿಯಲ್ಲಿ ಕೊರೋನಾ ಕೇಸು ಸಾವಿನ ಪ್ರಕರಣಗಳಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿದೆ.
ಸೆಪ್ಟೆಂಬರ್ 1 ರಿಂದ 15 ರ ಅವಧಿಯಲ್ಲಿ ಭಾರತದಲ್ಲಿ 13,08,991 ಪ್ರಕರಣಗಳು ಬಂದಿದ್ದು 16,307 ಸಾವು ವರಧಿಯಾಗಿದೆ.ಅಮೆರಿಕಾದಲ್ಲಿ 5,57,657 ಕೇಸು 11,461 ಸಾವು ಹಾಗೂ ಬ್ರೆಜಿಲ್ ನಲ್ಲಿ 4,83,299 ಪ್ರಕರಣಗಳು ದೃಢಪಟ್ಟಿವೆ.