ಅಣ್ಣನ ಸಾವಿನ ನೋವು, ಹಾಗೂ ಕೊರೋನಾ ಮಹಾಮಾರಿಯ ಕಾಟದಿಂದ ಈ ಬಾರಿ ಸ್ಯಾಂಡಲ್ವುಡ್ ನಟ ಧ್ರುವಸರ್ಜಾ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ. ಹಾಗಾಗಿ ಅಭಿಮಾನಿಗಳು ಈ ಬಾರಿ ಮನೆ ಕಡೆ ಬಾರದೆ ತಾವು ಇದ್ದ ಕಡೆಯಿಂದಲೇ ಶುಭ ಹಾರೈಸಿದರೆ ಸಾಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ತನ್ನ ಸಹೋದರ ಚಿರು ಸರ್ಜಾ ಅವರು ತೀರಿಕೊಂಡಿದ್ದು ಧ್ರುವಸರ್ಜಾ ಅವರು ಒಂಟಿಯಾದ ನೋವಿನಲ್ಲಿದ್ದಾರೆ.
ಧ್ರುವಸರ್ಜಾ ಅವರು 33ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಅಭಿಮಾನಿಗಳೇ ನಮ್ಮ ಅನ್ನದಾತರು ಅಭಿಮಾನಿಗಳನ್ನು ಮನೆ ಹತ್ತಿರ ಬರಬೇಡಿ ಎನ್ನಲು ಮನಸಿಲ್ಲ. ನೀವಿದ್ದ ಕಡೆಯಿಂದಲೇ ಹಾರೈಸಿ ನಿಮ್ಮ ಹಾರೈಕೆಯೇ ನನಗೆ ಶ್ರೀರಕ್ಷೆ ಜೈ ಆಂಜನೇಯ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಪೊಗರು ಸಿನೆಮಾ ಕೆಲಸದಲ್ಲಿ ತೊಡಗಿಸಿಕೊಂಡಿರುವ ಧ್ರುವಸರ್ಜಾ ತನ್ನ ಜನ್ಮದಿನದಂದೂ ಕೂಡ ಸಿನೆಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಲದ ಹುಟ್ಟುಹಬ್ಬಕ್ಕೆ ಯಾವುದೇ ಪೋಸ್ಟರ್ ಆಗಲಿ ಟೀಸರ್ ಆಗಲಿ ಬಿಡುಗಡೆ ಆಗುವುದಿಲ್ಲವೆಂದು ನಿರ್ಧೇಶಕ ನಂದಕಿಶೋರ್ ತಿಳಿಸಿದ್ದಾರೆ.