ಸ್ಯಾಂಡಲ್‍ವುಡ್‍ನ ಕ್ಯೂಟ್ ಜೋಡಿ ಅಂದ್ರೆ ಅದು ಯಶ್ ದಂಪತಿ …ತಾವಿಬ್ಬರು ಜೋಡಿಯಾಗಿ ನಟಿಸಿದ ಸಿನಿಮಾನು ಹಿಟ್ ; ನಿಜ ಜೀವನದಲ್ಲೂ ಇವರಿಬ್ಬರದ್ದು ಸೂಪರ್ ಹಿಟ್ ಜೋಡಿಯಾಗಿದೆ ಅನ್ನೋದು ಚಿತ್ರರಂಗದ ಮಾತು. ತಾವು ಮಾಡೋ ಪ್ರತಿಯೊಂದು ಕೆಲಸನು ವಿಶೇಷತೆಯಿಂದ ಕೂಡಿರುತ್ತದೆ.ಯಶ್ ರಾಧಿಕಾಗೆ ಹೇಗೆ ಅಭಿಮಾನಿಗಳಿದ್ದಾರೋ ಹಾಗೆಯೇ ಅವರಿಬ್ಬರ ಪುತ್ರಿ ಐರಾಳಿಗೂ ಅವರದ್ದೇ ಆದ ಅಭಿಮಾನಿಗಳಿದ್ದಾರೆ.. ಇದೀಗ ಐರಾ ಉಗುರು ಕಟ್ ಮಾಡಿಸಿಕೊಳ್ಳೋ ಮೂಲಕ ಸುದ್ದಿಯಾಗಿದ್ದಾಳೆ.
ಹೌದು ಚಿಕ್ಕ ಮಕ್ಕಳ ಉಗುರು ಕಟ್ ಮಾಡೋದಂದ್ರೆ ಬಹಳ ಕಷ್ಟದ ಕೆಲಸ . ತಮ್ಮ ಪುಟ್ಟ ಹಾಗೂ ಮೃದು ಕೈಗಳನ್ನು ಮುಟ್ಟಿ ಉಗುರು ಕಟ್ ಮಾಡೋದಂದ್ರೆ ಅದು ಸಾಹಸದ ಕೆಲಸ.. ಉಗುರು ಕಟ್ ಮಾಡೋ ಸಂದರ್ಭದಲ್ಲಿ ಮಕ್ಕಳು ಹಠ ಹಿಡಿಯೋದು, ಅಳೋದು ಸಾಮಾನ್ಯ . ಆದ್ರೆ ಐರಾ ಮಾತ್ರ ಎಂಜಾಯ್ ಮಾಡ್ತಾ ಉಗುರು ಕಟ್ ಮಾಡ್ಸಿಕೊಂಡಿದ್ದಾಳೆ..
ರಾಧಿಕಾ ತಮ್ಮ ಮುದ್ದಿನ ಮಗಳಿಗೆ ನೋವಾಗಬಾರದು ಎಂಬ ಕಾರಣಕ್ಕೆ ಚಾಕಚಕ್ಯತೆಯಿಂದ ಉಗುರು ಕಟ್ ಮಾಡಿದ್ದು .. ಮಗಳು ಅಮ್ಮನ ಮಾತನ್ನು ಕೇಳುತ್ತಾ ವಿಧೇಯತೆಯಿಂದ ನೈಲ್ ಕಟ್ ಮಾಡಿಸಿಕೊಂಡಿದ್ದಾಳೆ . ಇದೀಗ ಈ ವೀಡಿಯೋ ವೈರಲ್ ಆಗಿದ್ದು ಐರಾ ತುಂಟಾಟಕ್ಕೆ ಅಭಿಮಾನಿಗಳು ಖುಷ್ ಆಗಿದ್ದಾರೆ.