ಹಾಟ್ ಲುಕ್ ಮೂಲಕವೇ ಪಡ್ಡೆಗಳ ನಿದ್ದೆ ಕದ್ದಿರುವ ನಟಿ ಇಲಿಯಾನಾ ಸೋಶಿಯಲ್ ಮೀಡಿಯಾದಲ್ಲಂತೂ ಸಖತ್ ಆಕ್ಟೀವ್ ಅಗಿರುವವರು..ಇತ್ತೀಚೆಗೆಷ್ಟೇ ಬಾಯ್ ಫ್ರೆಂಡ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡು ಸುದ್ದಿಯಾಗಿದ್ದ ಅವರು ಹಾಟ್ ಫೊಟೋಶೂಟ್ ಮಾಡಿಸಿಕೊಂಡೂ ಸುದ್ದಿಯಲ್ಲಿದ್ದಾರೆ.. ಮೊನ್ನೆ ಮೊನ್ನೆಯಷ್ಟೇ ತಮಗಿರುವ ಕಾಯಿಲೆಯೊಂದರ ಬಗ್ಗೆ ಈ ಬೆಡಗಿ ಟ್ವೀಟ್ ಮಾಡಿದ್ದರು..ತನಗೆ ನಿದ್ದೆಯಲ್ಲಿ ನಡೆಯುವ ಕಾಯಿಲೆ ಇದೆ.. ಈ ಕಾಯಿಲೆಯಿಂದಾಗಿ ಬೆಳಗ್ಗೆ ಏಳುವಾಗ ಕಾಲು ಊತ, ಗಾಯಗಳಾಗಿರುವುದು ಕಂಡುಬಂದಿದೆ ಎಂದಿದ್ದಾರೆ..
ಇಲಿಯಾನ ಮಾಡಿರುವ ಈ ಟ್ವೀಟ್‍ಗೆ ಅಭಿಮಾನಿಗಳು ಬೇಸರಗೊಂಡಿದ್ದು, ನಮ್ ಹುಡ್ಗಿಗೆ ಹಿಂಗಾಯ್ತಲ್ಲಾ ಅಂತ ಮರುಗಿದ್ದಾರಂತೆ. ಅಲ್ಲದೆ ಬೇಗ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೀರಿ ಮೇಡಂ ಅಂದಿದ್ದಾರಂತೆ..