ನಟ ಸುಶಾಂತ್ ಮರಣೋತ್ತರ ಪರೀಕ್ಷೆ ಡಾ.ಆರ್.ಎನ್.ಕೂರಪ್ ಜನರಲ್ ಆಸ್ಪತ್ರೆಯಲ್ಲಿ ಪೂರ್ಣಗೊಂಡಿದ್ದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬರಲಾಗಿದೆ. ಆದ್ರೆ ಇದೀಗ ನಟ ಸುಶಾಂತ್ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದು; ಕೂಡಲೇ ಸಿಸಿಬಿ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ ..
ಸದ್ಯ ಸುಶಾಂತ್ ದೇಹದಲ್ಲಿ ವಿಷಕಾರಕ ಅಂಶ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ದೇಹದ ಭಾಗಗಳನ್ನು ಜೆ.ಜೆ.ಆಸ್ಪತ್ರೆಗೆ ರವಾನಿಸಲಾಗಿದೆ. ಇಂದು ಮುಂಬೈನಲ್ಲಿ ಸುಶಾಂತ್ ಅಂತ್ಯಸಂಸ್ಕಾರ ನಡೆಯಲಿದೆ. ಅಂದಹಾಗೆ ಸುಶಾಂತ್ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ ಜೊತೆಗೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ. ಆದ ಕಾರಣ ಇದು ಕೊಲೆ ಎಂದು ಸಂಶಯಿಸಿದ್ದು ತನಿಖೆ ನಡೆಯಲೇಬೇಕೆಂದು ಕುಟುಂಬಸ್ಥರ ಜೊತೆ ಹಲವರು ಒತ್ತಾಯಿಸಿದ್ದಾರೆ .
ಬಾಲಿವುಡ್ನಖ್ಯಾತನಟಸುಶಾಂತ್ಸಿಂಗ್ರಜಪೂತ್ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು; ಮುಂಬೈನ ತಮ್ಮ ಬಾಂದ್ರಾ ಅಪಾರ್ಟ್ ಮೆಂಟ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರಮೃತದೇಹ ಪತ್ತೆಯಾಗಿದೆ . ಈ ಮೂಲಕ ಇಡೀ ಬಾಲಿವುಡ್ ರಂಗ ಶಾಕ್ಗೆ ಒಳಗಾಗಿತ್ತು.